ಲಸಿಕೆ ಹಾಕಿಸಿಕೊಂಡ ವರನೇ ಬೇಕೆಂದ ವಧು – ಶಶಿ ತರೂರ್ ತಬ್ಬಿಬ್ಬು

 

ನವದೆಹಲಿ: ಲಸಿಕೆ ಹಾಕಿಸಿಕೊಂಡ ವರ ಬೇಕಾಗಿದ್ದಾನೆ ಎಂಬ ವಧುವಿನ ಡಿಮ್ಯಾಂಡ್ ನೋಡಿ ಶಶಿ ತರೂರ್ ತಬ್ಬಿಬ್ಬಾಗಿ ಟ್ವೀಟ್ ಮಾಡಿದ್ದಾರೆ.

ಮ್ಯಾಟ್ರಿಮೋನಿಯಲ್ ಜಾಹೀರಾತಿನಲ್ಲಿ ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್ ಅನ್ನು ಹಾಕಿಸಿಕೊಂಡಿರುವ ವರನನ್ನು ಯುವತಿ ಹುಡುಕುತ್ತಿದ್ದಾಳಂತೆ. ಜೂನ್ 4, 2021 ರಂದು ಪತ್ರಿಕೆಯೊಂದರ ವೈವಾಹಿಕ ಅಂಕಣದಲ್ಲಿ ಕಾಣಿಸಿಕೊಂಡಂತೆ ಇರುವ ಈ ಜಾಹೀರಾತಿನಲ್ಲಿ ಸ್ವಯಂ ಉದ್ಯೋಗಿ ರೋಮನ್ ಕ್ಯಾಥೊಲಿಕ್ ಮಹಿಳೆ ತನ್ನ ಧರ್ಮದ ವ್ಯಕ್ತಿಯೊಂದಿಗೆ ವಿವಾಹವಾಗಲು ಬಯಸಿದ್ದಾಳೆ. ಆದರೆ, ಷರತ್ತು ಮಾತ್ರ ವಿಭಿನ್ನವಾಗಿದೆ. ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್‍ಗಳನ್ನು ತಾನು ಹಾಕಿಸಿಕೊಂಡಿದ್ದೇನೆ. ಅದೇ ರೀತಿ, ತನ್ನನ್ನು ಮದುವೆಯಾಗುವ ಹುಡುಗ ಸಹ ಎರಡೂ ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಪ್ರಕಟಣೆ ಹೊರಡಿಸಿರುವುದು ವೈರಲ್ ಆಗುತ್ತಿದೆ. ಇದನ್ನೂ ಓದಿ: ಕುಡಿಯಲು ನೀರು ಸಿಗದೆ ಬಾಲಕಿ ಸಾವು

ಕಾಂಗ್ರೆಸ್ ಸಂಸದ ಶಶಿ ತರೂರ್ ಈ ಫೋಟೋವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಲಸಿಕೆ ಹಾಕಿಸಿಕೊಂಡ ವಧು ಲಸಿಕೆ ಹಾಕಿಸಿಕೊಂಡ ವರನನ್ನು ಹುಡುಕುತ್ತಿದ್ದಾಳೆ. ತನ್ನ ಆದ್ಯತೆಯ ಮದುವೆ ಆಕೆಗೆ ಬೂಸ್ಟರ್ ಡೋಸ್ ಆಗುವುದರಲ್ಲಿ ಸಂಶಯವಿಲ್ಲ. ಇದು ನಮ್ಮ ಹೊಸ ಸುಧಾರಣವಾಗಲಿದೆಯೇ? ಎಂದು ತರೂರ್ ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಇದನ್ನೂ ಓದಿ: ಅಧಿಕಾರ ಶಾಶ್ವತವಲ್ಲ, ಜನರ ಸೇವೆ ಪೂರ್ವಜನ್ಮದ ಪುಣ್ಯದ ಕೆಲಸ – ಕಿಟ್ ವಿತರಿಸಿದ ಶಾಸಕ ಮುನಿರತ್ನ

ಈ ವೈವಾಹಿಕ ಜಾಹೀರಾತಿನ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೋವಿಡ್ ಲಸಿಕೆಗಳು ಅಂತಿಮವಾಗಿ ಮ್ಯಾಟ್ರಿಮೋನಿಯಲ್ ಜಾಹೀರಾತು ಪ್ರವೇಶಿಸಿದೆ. ಈಗ ಜಾತಿ ಮತ್ತು ಧರ್ಮದ ಜೊತೆಗೆ ಲಸಿಕೆ ಕಡ್ಡಾಯವಾಗಿದೆ ಎಂದು ಅನೇಕರು ತರೂರ್ ಅವರ ಪೋಸ್ಟ್ ಕುರಿತು ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯಿಸಿದ್ದಾರೆ.

The post ಲಸಿಕೆ ಹಾಕಿಸಿಕೊಂಡ ವರನೇ ಬೇಕೆಂದ ವಧು – ಶಶಿ ತರೂರ್ ತಬ್ಬಿಬ್ಬು appeared first on Public TV.

Source: publictv.in

Source link