ಚಾಮರಾಜನಗರ: ಕೊರೊನಾ ಲಸಿಕೆ ಪಡೆಯಲು ಗ್ರಾಮೀಣ ಭಾಗದಲ್ಲಿ ಜಾಗೃತಿ ಇಲ್ಲದ ಕಾರಣ ಹಲವರು ಹಿಂದೇಟು ಹಾಕುತ್ತಿದ್ದಾರೆ. ಹಲವು ಭಾಗಗಳಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಜನರ ಮನವೊಲಿಸುವ ಕಾರ್ಯ ಮಾಡುತ್ತಿದ್ದಾರೆ. ಇದರ ನಡುವೆ ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ಅವರೇ ಸ್ವತಃ ಹಾಡಿಗಳಿಗೆ ಭೇಟಿ ನೀಡಿ ಜನರಿಗೆ ತಿಳಿ ಹೇಳುವ ಮೂಲಕ ವ್ಯಾಕ್ಸಿನ್​ ಹಾಕಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

ಅಧಿಕಾರಿಗಳು ಎಷ್ಟೇ ಜಾಗೃತಿ ಮೂಡಿಸಿದರೂ ಗ್ರಾಮೀಣ ಭಾಗದಲ್ಲಿ ಜನರು ಲಸಿಕೆ ಹಾಕಿಸಿಕೊಂಡಿರಲಿಲ್ಲ. ಅದರಲ್ಲೂ ಕಾರೇಮಾಳ ಹಾಡಿ ಜನರು ಲಸಿಕೆ ಬೇಡವೇ ಬೇಡ ಎಂದು ನಿರಾಕರಿಸಿದ್ದರು. ಈ ಕುರಿತು ಮಾಹಿತಿ ಪಡೆದ ಶಾಸಕ ನಿರಂಜನ್ ಕುಮಾರ್, ಹಾಡಿ ಜನರಿಗೆ ಲಸಿಕೆ ಮಹತ್ವ ತಿಳಿಸಿ, ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರೇಪಿಸಿದರು.

ಶಾಸಕ ನಿರಂಜನ್ ಕುಮಾರ್ ಮನವಿಗೆ ಪೂರಕವಾಗಿ ಸ್ಪಂಧಿಸಿದ ಹಲವರು ಲಸಿಕೆ ಪಡೆದುಕೊಂಡಿದ್ದಾರೆ. ಈ ಭಾಗದಲ್ಲಿ ಆಶಾ ಕಾರ್ಯಕರ್ತರೊಂದಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮನೆ ಮನೆಗೂ ಭೇಟಿ ನೀಡಿ ಲಸಿಕೆ ನೀಡಿದ್ದಾರೆ.

The post ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು; ಫೀಲ್ಡ್​​ಗಿಳಿದು ಲಸಿಕೆ ಹಾಕಿಸಿದ ಶಾಸಕ ನಿರಂಜನ್ ಕುಮಾರ್ appeared first on News First Kannada.

Source: newsfirstlive.com

Source link