ಕೊರೊನಾ ಲಸಿಕೆ ಹಾಕಿಸಿಕೊಳ್ಳಿ, ಇಲ್ಲದಿದ್ದರೆ ನಿಮಗೆ ಬೇಕಾದ್ರೆ ಭಾರತಕ್ಕೆ ಹೋಗಿ ಅಥವಾ ಬೇರೆ ಎಲ್ಲಾದ್ರೂ ಅಮೆರಿಕಾಗೆ ಹೋಗಿ ಎಂದು ಕೊರೊನಾ ಲಸಿಕೆ ಪಡೆಯದ ತನ್ನ ದೇಶದ ಪ್ರಜೆಗಳಿಗೆ ಫಿಲಿಪೈನ್ಸ್ ಅಧ್ಯಕ್ಷ ರೋಡ್ರಿಗೋ ಎಚ್ಚರಿಕೆ ನೀಡಿದ್ದಾರೆ.

ಲಸಿಕೆ ಪಡೆಯದವರನ್ನು ಜೈಲಿಗೆ ಹಾಕಲಾಗುತ್ತದೆ. ಇಲ್ಲವೇ ನೀವೇ ದೇಶಬಿಟ್ಟು ಭಾರತ ಅಥವಾ ಅಮೆರಿಕಕ್ಕೆ ಹೊರಡಿ ಎಂದು ಅವರು ಟಿವಿ ಮೂಲಕ ದೇಶವನ್ನುದ್ದೇಶಿಸಿ ಮಾತನಾಡುವಾಗ ಹೇಳಿದ್ದಾರೆ.

ಫಿಲಿಪೈನ್ಸ್‌ ನಿವಾಸಿಗಳೇ ದಯವಿಟ್ಟು ಕೇಳಿ. ನನ್ನ ಕೈಗಳಿಂದ ಈ ಕೆಲಸ ಮಾಡಲು ನೀವು ಬಲವಂತ ಮಾಡಬೇಡಿ. ನನಗೆ ಬಲವಾದ ತೋಳುಗಳಿವೆ. ಅದರೆ ಬಲ ಪ್ರಯೋಗ ಮಾಡಲು ನನಗೆ ಇಷ್ಟವಿಲ್ಲ. ರಾಷ್ಟ್ರೀಯ ಹಿತಾಸಕ್ತಿಗಾಗಿ ಅನಿವಾರ್ಯವಾದರೆ ಖಂಡಿತ ಮಾಡುತ್ತೇನೆ. ಯಾರೂ ಅದನ್ನು ಇಷ್ಟಪಡುವುದಿಲ್ಲ. ನನ್ನನ್ನು ತಪ್ಪಾಗಿ ಅರ್ಥಮಾಡಿಕೊಳ್ಳಬೇಡಿ ಅಂತಾ ರೋಡ್ರಿಗೋ ಹೇಳಿದ್ದಾರೆ.

ವರದಿಗಳ ಪ್ರಕಾರ ಫಿಲಿಪೈನ್ಸ್ನ ಅರ್ಧದಷ್ಟು ಜನ ಲಸಿಕೆ ಬಗ್ಗೆ ಆತಂಕ ಹಾಗೂ ಕಳವಳ ಹೊಂದಿದ್ದು, ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹಿಂದೇಟು ಹಾಕ್ತಿದ್ದಾರೆ ಎನ್ನಲಾಗಿದೆ.

The post ‘ಲಸಿಕೆ ಹಾಕಿಸಿಕೊಳ್ಳಿ, ಇಲ್ಲದಿದ್ರೆ ಭಾರತಕ್ಕೋ.. ಅಮೆರಿಕಾಗೋ ಹೋಗಿ’ -ಪ್ರಜೆಗಳಿಗೆ ಫಿಲಿಪೈನ್ಸ್​ ಅಧ್ಯಕ್ಷ ವಾರ್ನಿಂಗ್ appeared first on News First Kannada.

Source: newsfirstlive.com

Source link