ಚಿಕ್ಕಬಳ್ಳಾಪುರ: ಅಕ್ರಮ ಮದ್ಯ ಸಾಗಾಟ ಮತ್ತು ದಾಸ್ತಾನು ಮೇಲೆ ಅಬಕಾರಿ ಪೊಲೀಸರು ದಾಳಿ ನಡೆಸಿ 1.5 ಲಕ್ಷ ಮೌಲ್ಯದ 210 ಲೀಟರ್ ಅಕ್ರಮವಾಗಿ ಸಂಗ್ರಹಿಸಿದ್ದ ಮದ್ಯವನ್ನ ಜಪ್ತಿ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಕೊಂಡಂವಾರಿಪಲ್ಲಿ ಗ್ರಾಮದ ಶಂಕರಪ್ಪ ಮನೆಯಲ್ಲಿ 200 ಲೀಟರ್ ಮದ್ಯ ಸೀಜ್ ಮಾಡಲಾಗಿದೆ. ಇನ್ನು ಬಾಗೇಪಲ್ಲಿಯಿಂದ ಆಂಧ್ರ ಪ್ರದೇಶಕ್ಕೆ ಸಾಗಿಸುತ್ತಿದ್ದ 10 ಲೀಟರ್ ಮದ್ಯವನ್ನ ಹಾಗೂ ಓರ್ವ ಆರೋಪಿಯನ್ನ ಬಂಧಿಸಿ ಪಡೆದುಕೊಂಡಿದ್ದಾರೆ.

ಮೋತಿಲಾಲ್ ಬಂಧಿತ ಆರೋಪಿ. ಬಾಗೇಪಲ್ಲಿ‌ ಅಬಕಾರಿ ಅಧಿಕಾರಿ ಅಂಜಿನಾಮೂರ್ತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು. ಸುಮಾರು 1.5 ಲಕ್ಷ ಮೌಲ್ಯದ ಮದ್ಯವನ್ನ ನೋಡಿದ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಮೂಲಗಳ ಪ್ರಕಾರ ಲಾಕ್​​ಡೌನ್​ ಹಿನ್ನೆಲೆಯಲ್ಲಿ ಮದ್ಯ ಮೊದಲಿನಂತೆ ಸಿಗುತ್ತಿಲ್ಲ. ಇದನ್ನೇ ಬಂಡವಾಳವನ್ನಾಗಿ ಮೊಡಿಕೊಂಡಿರುವ ಕೆಲವು ಕಿಡಿಗೇಡಿಗಳು ಅಕ್ರಮವಾಗಿ ಮದ್ಯ ಸಂಗ್ರಹಿಸಿ, ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲು ಮುಂದಾಗಿದ್ದರು ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ತನಿಖೆಯನ್ನ ಮುಂದುವರಿಸಿದ್ದಾರೆ.

The post ಲಾಕ್ಡೌನ್​​ನಲ್ಲಿ ಅಕ್ರಮ ಮದ್ಯ ಸಂಗ್ರಹ, ಸಾಗಾಟ ದಂಧೆ: ದಂಗಾಗಿ ಹೋದ ಅಧಿಕಾರಿಗಳು appeared first on News First Kannada.

Source: newsfirstlive.com

Source link