ಬೆಂಗಳೂರು: ನಂಜನಗೂಡು ದೇವಾಲಯದಲ್ಲಿ ಸಿಎಂ ಪುತ್ರ & ಕುಟುಂಬದವರು ಪೂಜೆ ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ವಿಜಯೇಂದ್ರ ವಿರುದ್ಧದ ಕೊರೊನಾ ರೂಲ್ಸ್​ ಬ್ರೇಕ್​ ಅರ್ಜಿ ವಿಚಾರಣೆ ಇಂದು ಹೈಕೋರ್ಟ್​ನಲ್ಲಿ ನಡೆಯಿತು.

ಈ ವೇಳೆ ವಿಜಯೇಂದ್ರ ಭೇಟಿಯನ್ನ ಸಮರ್ಥಿಸಿಕೊಂಡ ಸರ್ಕಾರ.. ಕೋವಿಡ್ ಸಂಬಂಧಿತ ಕಾರ್ಯಕ್ಕಾಗಿ ವಿಜಯೇಂದ್ರ ತೆರಳಿದ್ದರು.. ಆ್ಯಂಬುಲೆನ್ಸ್ ಸೇವೆ ಉದ್ಘಾಟಿಸಲು ತೆರಳಿದ್ದರು. ದೇವಾಲಯಕ್ಕೆ ತೆರೆಳಿದ್ದ ವೇಳೆ ಪ್ರವೇಶ ನೀಡಿದ್ದಾರೆ.. ಅರ್ಚಕರೇ ವಿಜಯೇಂದ್ರಗೆ ಪ್ರವೇಶ ನೀಡಿದ್ದಾರೆ ಎಂದು ಸರ್ಕಾರದ ಎಜಿ ಪ್ರಭುಲಿಂಗ್ ನಾವದಗಿ ಹೇಳಿಕೆ ನೀಡಿದ್ದಾರೆ.

ಈ ವೇಳೆ ಪ್ರತಿಕ್ರಿಯಿಸಿದ ಹೈಕೋರ್ಟ್ ಸಿಜೆ ಎ.ಎಸ್. ಒಕಾ.. ಆ ರಾಜಕಾರಣಿಯೇ ದೇವಾಲಯ ಪ್ರವೇಶ ಒಪ್ಪಿಕೊಂಡಿದ್ದಾರೆ. ನಿರ್ಬಂಧವಿದ್ದರೂ ದೇವಾಲಯ ಪ್ರವೇಶ ಸ್ಪಷ್ಟ ಉಲ್ಲಂಘನೆ. ಇದನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ದೇವಾಲಯ ತೆರೆದಿದ್ದರೆ ಜನಸಾಮಾನ್ಯ ಪ್ರವೇಶಿಸಬಹುದೇ. ರಾಜಕಾರಣಿಗಳಿಗೆ ಇರುವ ಸವಲತ್ತು ಜನರಿಗೂ ಇದೆಯೇ.? ಕೋವಿಡ್ ಮಾರ್ಗಸೂಚಿ ರಾಜಕಾರಣಿಗೆ ಅನ್ವಯವಾಗುವುದಿಲ್ಲವೇ.? ಇದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಈ ಬಗ್ಗೆ ಜಿಲ್ಲಾಧಿಕಾರಿ ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ ನೀಡಿದೆ. ಜಿ. ಆರ್. ಮೋಹನ್, ಪುತ್ತಿಗೆ ರಮೇಶ್ ಕೋರ್ಟ್​​ಗೆ ಪಿಐಎಲ್​ ಸಲ್ಲಿಸಿದ್ದರು.

The post ಲಾಕ್ಡೌನ್​​ನಲ್ಲಿ ವಿಜಯೇಂದ್ರ ದೇವಸ್ಥಾನ ಭೇಟಿ.. ಸಮರ್ಥಿಸಿಕೊಂಡ ಸರ್ಕಾರಕ್ಕೆ ಹೈಕೋರ್ಟ್ ತರಾಟೆ appeared first on News First Kannada.

Source: newsfirstlive.com

Source link