ಬೆಂಗಳೂರು: ಕೊರೊನಾ ನಿಯಂತ್ರಣಕ್ಕಾಗಿ ಜಾರಿ ಮಾಡಿರೋ ಲಾಕ್​ಡೌನನ್ನೇ ಬಂಡವಾಳ ಮಾಡಿಕೊಂಡು ಬೈಕ್​ ಕಳ್ಳತನಕ್ಕೆ ಇಳಿದಿದ್ದ ಮೂವರು ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.

ಕಬೀರ್ (20), ರೋಷನ್ (20) ಹಾಗೂ ಅಸ್ಟರ್ ಪಾಷಾ (20) ಬಂಧಿತ ಆರೋಪಿಗಳು. ಜೆ.ಜೆ ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಬೈಕ್ ಕಳ್ಳರನ್ನ ಸೆರೆಹಿಡಿದಿದ್ದಾರೆ. ಬಂಧಿತರೆಲ್ಲರೂ 20ರ ಪ್ರಾಯದ ಯುವಕರೇ ಆಗಿದ್ದು, ಜೆ.ಜೆ ನಗರ, ಕೆಂಗೇರಿ, ಕುಂಬಳಗೋಡು, ಸಿಟಿ ಮಾರ್ಕೆಟ್, ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನದ ಕೈಚಳಕ ತೋರಿದ್ದರು ಎನ್ನಲಾಗಿದೆ.

ಬಂಧಿತರಿಂದ 4 ಲಕ್ಷ ರೂಪಾಯಿ ಮೌಲ್ಯದ ಆರು ಬೈಕ್​ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

The post ಲಾಕ್​ಡೌನನ್ನೇ ಬಂಡವಾಳ ಮಾಡ್ಕೊಂಡ ಬೈಕ್​​ ಕಳ್ಳರು ಅರೆಸ್ಟ್​- 6 ಬೈಕ್ ವಶ appeared first on News First Kannada.

Source: newsfirstlive.com

Source link