ಲಾಕ್​ಡೌನ್​ನಲ್ಲಿ ರಸ್ತೆ ಬಳಿ ನಿಲ್ಲಿಸಿದ್ದ ಬುಲ್ಡೋಜರ್ ಕದ್ದು ಗುಜುರಿಗೆ ಮಾರಿದ ಖದೀಮರು

ಲಾಕ್​ಡೌನ್​ನಲ್ಲಿ ರಸ್ತೆ ಬಳಿ ನಿಲ್ಲಿಸಿದ್ದ ಬುಲ್ಡೋಜರ್ ಕದ್ದು ಗುಜುರಿಗೆ ಮಾರಿದ ಖದೀಮರು

ಬೆಂಗಳೂರು: ನಗರದಲ್ಲಿ ಖದೀಮರು ರಸ್ತೆ ಬದಿ ನಿಲ್ಲಿಸಿದ್ದ ಬುಲ್ಡೋಜರ್​ವೊಂದನ್ನ ಕದ್ದೊಯ್ದು, ಕಬ್ಬಿಣದ ಗುಜುರಿಗೆ ಮಾರಾಟ ಮಾಡಿರೋ ಪ್ರಕರಣ ಬೆಳಕಿಗೆ ಬಂದಿದೆ.

ತಮಿಳುನಾಡು ಮೂಲದ ಸೆಲ್ವರಾಜ್ ಎಂಬವರಿಗೆ ಸೇರಿದ ಬುಲ್ಡೋಜಜರ್ ಇದಾಗಿತ್ತು. ಸೆಲ್ವರಾಜ್ ಗುತ್ತಿಗೆ ಆಧಾರದಲ್ಲಿ ರಸ್ತೆ ಕಾಮಗಾರಿ ಕೆಲಸ ಮಾಡ್ತಿದ್ರು. ಹೀಗಾಗಿ ₹5.50 ಲಕ್ಷ ಹಣ ನೀಡಿ ತಮಿಳುನಾಡಿನಿಂದ ಚಂದ್ರಾಲೇಔಟ್​ಗೆ ಬುಲ್ಡೋಜರ್ ತಂದಿದ್ರು. ಲಾಕ್​ಡೌನ್ ಹಿನ್ನೆಲೆ ಕಳೆದ ಮೇ ನಲ್ಲಿ ಕಾಮಗಾರಿ ಸ್ಥಗಿತಗೊಂಡ ಕಾರಣ ಸೆಲ್ವರಾಜ್ ನಾಗರಬಾವಿ ಬಳಿ ಬುಲ್ಡೋಜರ್ ಪಾರ್ಕ್ ಮಾಡಿ ತಮಿಳುನಾಡಿನ ತಿರುವಣ್ಣಾಮಲೈಗೆ ತೆರಳಿದ್ರು.

ಜೂನ್ 12ರಂದು ಭರತ್ ಮತ್ತು ಪವನ್ ಎಂಬ ಆರೋಪಿಗಳು ನಾಗರಬಾವಿ ಬಳಿ ನಿಲ್ಲಿಸಿದ್ದ ಬುಲ್ಡೋಜರ್ ಕದ್ದೊಯ್ದಿದ್ದಾರೆ. ಜೂನ್ 16ರಂದು ಸೆಲ್ವರಾಜ್ ಬಂದು ನೋಡಿದಾಗ ವಾಹನ ಕಳುವಾಗಿರೋದು ಪತ್ತೆಯಾಗಿದೆ. ಕೂಡಲೇ ಅವರು ಈ ಬಗ್ಗೆ ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದರು.

ಆರೋಪಿಗಳಾದ ಭರತ್ ಮತ್ತು ಪವನ್ ಸೇರಿ ಬುಲ್ಡೋಜರ್​ನ ಮಾಗಡಿರಸ್ತೆಯ ಸೀಗೆಹಳ್ಳಿ ಬಳಿ ಗುಜುರಿ ವ್ಯಾಪಾರಿ ಇಸ್ಮಾಯಿಲ್ ಎಂಬಾತನಿಗೆ ಮಾರಾಟ ಮಾಡಿದ್ದರು. ಕಬ್ಬಿಣದ ತೂಕದ ಲೆಕ್ಕದಲ್ಲಿ 7 ಸಾವಿರದ 200 ಕೆ.ಜಿ ತೂಕದ ಬುಲ್ಡೋಜರ್​ನ ಭಾಗಗಳನ್ನ ಕೆ.ಜಿಗೆ 28 ರೂಪಾಯಿಯಂತೆ ಸೇಲ್ ಮಾಡಿದ್ರು. ಬಳಿಕ ಇಸ್ಮಾಯಿಲ್ ಬುಲ್ಡೋಜರ್​ನ ಪಾರ್ಟ್ಸ್ ಬಿಚ್ಚಿ ಕಬ್ಬಿಣದ ರೀತಿ ರೀಸೇಲ್ ಮಾಡಲು ಮುಂದಾಗಿದ್ದ.

ಚಂದ್ರಾಲೇಔಟ್ ಠಾಣೆ ಪೊಲೀಸರು ಈಗ ಪವನ್​ನನ್ನು ಅರೆಸ್ಟ್​ ಮಾಡಿದ್ದಾರೆ. ನಾಪತ್ತೆಯಾಗಿರೋ ಭರತ್ ಹಾಗೂ ಇಸ್ಮಾಯಿಲ್​ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸೆಲ್ವರಾಜ್ ಕಳೆದ ಎರಡು ವರ್ಷಗಳಿಂದ ನಾಗರಬಾವಿ ಸರ್ಕಲ್ ಗ್ರೌಂಡ್ ಬಳಿಯೇ ಬುಲ್ಡೋಜರ್ ನಿಲ್ಲಿಸ್ತಿದ್ರು. ಆದ್ರೆ ಕಳೆದ ಲಾಕ್​ಡೌನ್​​ನಲ್ಲಿ ಆರೋಪಿಗಳು ಈ ಖತರ್ನಾಕ್ ಕೆಲಸ ಮಾಡಿ ಈಗ ಸಿಕ್ಕಿಬಿದ್ದಿದ್ದಾರೆ.

The post ಲಾಕ್​ಡೌನ್​ನಲ್ಲಿ ರಸ್ತೆ ಬಳಿ ನಿಲ್ಲಿಸಿದ್ದ ಬುಲ್ಡೋಜರ್ ಕದ್ದು ಗುಜುರಿಗೆ ಮಾರಿದ ಖದೀಮರು appeared first on News First Kannada.

Source: newsfirstlive.com

Source link