ಅಂಬಾರಿ, ಅದ್ಧೂರಿ ಸಿನಿಮಾಗಳ ಮೂಲಕ ನಿರ್ದೇಶಕರಾಗಿ ಸೈ ಎನಿಸಿಕೊಂಡಿರುವ ಎ.ಪಿ ಅರ್ಜುನ್​ ಸದ್ಯ ತಂದೆಯಾಗುವ ಖುಷಿಯಲ್ಲಿದ್ದಾರೆ. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎ.ಪಿ.ಅರ್ಜುನ್ ಹಾಗೂ ಅನ್ನಪೂರ್ಣ ಜೋಡಿ. ಇತ್ತೀಚೆಗೆ ಎ.ಪಿ ಅರ್ಜುನ್​ ಮನೆಯಲ್ಲೇ ಸೀಮಂತ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಮತ್ತೆ ಲಾಕ್​ಡೌನ್​ ಹೇರಿರುವ ಕಾರಣ, ತುಂಬಾ ಸರಳವಾಗಿ ಆಪ್ತರ ಸಮ್ಮುಖದಲ್ಲಿ ಸೀಮಂತ ನಡೆದಿದೆ.

ಅಂದ್ಹಾಗೇ ಕಳೆದ ವರ್ಷ ಲಾಕ್​ಡೌನ್​ ಸಂದರ್ಭದಲ್ಲೇ ನಿರ್ದೇಶಕ ಎ.ಪಿ ಅರ್ಜುನ್​ ತಮ್ಮ ಮನೆಯಲ್ಲೇ ಅನ್ನಪೂರ್ಣ ಅವರೊಂದಿಗೆ ಹಸೆಮಣೆ ಏರಿದ್ದರು. 2020ರ ಮೇ10ರಂದು ಅರ್ಜುನ್​ ಮನೆಯಲ್ಲೇ ಹಾಸನ ಮೂಲದ ಅನ್ನಪೂರ್ಣ ಜೊತೆ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ನಡೆದಿತ್ತು. ಇದೀಗ ಸೀಮಂತ ಕೂಡ ಲಾಕ್​ಡೌನ್​ ಸಂದರ್ಭದಲ್ಲೇ ನಡೆದಿದೆ.

ತಮ್ಮ ಪ್ರೀತಿಯ ಮಡದಿಯ ಸೀಮಂತದ ಫೊಟೋಗಳನ್ನ ಅರ್ಜುನ್​ ಟ್ವೀಟ್​ ಮಾಡುವ ಮೂಲಕ ಅಭಿಮಾನಿಗಳ ಜೊತೆ ಖುಷಿಯನ್ನ ಹಂಚಿಕೊಂಡಿದ್ದಾರೆ. ‘ಮುದ್ದು ಮಡದಿಯ ಸೀಮಂತ. ಎಲ್ಲರ ಪ್ರೀತಿ, ಆಶೀರ್ವಾದ ಇರಲಿ’ ಅಂತ ಬರೆದು ಪೋಸ್ಟ್​ ಮಾಡಿದ್ದಾರೆ.

The post ಲಾಕ್​ಡೌನ್​ನಲ್ಲೇ ಮದುವೆ & ಸೀಮಂತ; ತಂದೆಯಾಗೋ ಖುಷಿಯಲ್ಲಿ ನಿರ್ದೇಶಕ ಎ.ಪಿ ಅರ್ಜುನ್​ appeared first on News First Kannada.

Source: newsfirstlive.com

Source link