ಮುಂಬೈ: ಬಾಲಿವುಡ್​ನ ರೂಮರ್ಡ್​​​ ಲವ್​ ಬರ್ಡ್ಸ್​​ ನಟ ಟೈಗರ್​ ಶ್ರಾಫ್​ ಹಾಗೂ ನಟಿ ದಿಶಾ ಪಟಾನಿ ಕೊರೊನಾ ಇದ್ದರೂ ಜಾಲಿ ರೈಡ್​ ಮಾಡಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಜಿಮ್​ನಿಂದ ವರ್ಕ್​ಔಟ್​ ಮುಗಿಸಿ ವಾಪಾಸ್​ ಆಗುವ ವೇಳೆ ಇಬ್ಬರೂ ಕಾರಿನಲ್ಲಿ ಮುಂಬೈನ ಬಾಂದ್ರಾ ರಸ್ತೆಗಳಲ್ಲಿ ಡ್ರೈವ್​ ಹೋಗಿದ್ರು. ಈ ವೇಳೆ ಪೊಲೀಸರು ಕಾರನ್ನ ಅಡ್ಡಗಟ್ಟಿ ವಿಚಾರಣೆ ನಡೆಸಿದ್ದಾರೆ. ಆಧಾರ್​ ಕಾರ್ಡ್​ ಸೇರಿದಂತೆ ಮತ್ತಿತರ ದಾಖಲೆಗಳನ್ನ ವಶಪಡಿಸಿಕೊಂಡ ಪೊಲೀಸರು ಇಬ್ಬರಿಗೂ ಬುದ್ದಿವಾದ ಹೇಳಿ, ನಿಯಮ ಉಲ್ಲಂಘಿಸಿದಕ್ಕೆ ಟೈಗರ್​ ಶ್ರಾಫ್​ ವಿರುದ್ಧ ದೂರು ಕೂಡ ದಾಖಲಿಸಿದ್ದಾರೆ.

ಇದು ಬೇಲೆಬಲ್ ಕೇಸ್​ ಆದ್ದರಿಂದ ನಟನನ್ನು ಬಂಧನ ಮಾಡಿಲ್ಲ ಅಂತ ವರದಿಯಾಗಿದೆ.

The post ಲಾಕ್​ಡೌನ್​​ ವೇಳೆ ಜಾಲಿ ರೈಡ್: ಸಂಕಷ್ಟಕ್ಕೆ ಸಿಲುಕಿದ ಬಾಲಿವುಡ್​ ಲವ್​ಬರ್ಡ್ಸ್​ appeared first on News First Kannada.

Source: newsfirstlive.com

Source link