ಬೆಳಗಾವಿ: ಲಾಕ್​​ಡೌನ್ ನಿಯಮ ಉಲ್ಲಂಘಸಿ ಅದ್ಧೂರಿಯಾಗಿ ಮದುವೆ ಸಮಾರಂಭ ನಡೆಸಿದ ಕುಟುಂಬವೊಂದು ಭಾರೀ ದಂಡ ತೆತ್ತಿದೆ. ಗೋಕಾಕ ತಾಲೂಕಿನ ನಲ್ಲಾನಟ್ಟಿ ಗ್ರಾಮದ ಮದುವೆ ಮಂಟಪದ ಮೇಲೆ ಅಧಿಕಾರಿಗಳು ಹಾಗೂ ಪೋಲಿಸರು ದಾಳಿ‌ ನಡೆಸಿ 20 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

ಕೇಂದ್ರ ಸರ್ಕಾರದ ಅಂಚೆ ಕಚೇರಿಯಲ್ಲಿ ನೌಕರರಾಗಿ ಕೆಲಸ ಮಾಡುತ್ತಿರುವ, ಗ್ರಾಮದ ದಶರಥ ಪಾಟೀಲ ಎಂಬವರು ಸರ್ಕಾರದಿಂದ ಯಾವುದೇ ಅನುಮತಿ ಪಡೆಯದೆ ತಮ್ಮ ಮಕ್ಕಳ ಮದುವೆಯನ್ನು ಮಾಡುತ್ತಿದ್ದರು. ಅತಿಥಿಗಳಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಿದ್ದರು.‌

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳಿಯ ಘಟಪ್ರಭಾ ಪೋಲಿಸರು, ಗ್ರಾಮ ಪಂಚಾಯತ್ ಪಿಡಿಓ ಹಾಗೂ ಗ್ರಾಮ ಲೆಕ್ಕಾಧಿಕಾರಿ ಸೇರಿ ಪಾಟೀಲ್ ಕುಟುಂಬಕ್ಕೆ 20 ಸಾವಿರ ದಂಡ ಹಾಕಿದ್ದಾರೆ.

 

The post ಲಾಕ್​ಡೌನ್​ ಉಲ್ಲಂಘಿಸಿ ಅದ್ಧೂರಿ ಮದುವೆ ಮಾಡ್ತಿದ್ದವ್ರಿಗೆ ಶಾಕ್, ₹20,000 ದಂಡ appeared first on News First Kannada.

Source: newsfirstlive.com

Source link