ವಿಜಯಪುರ: ವಿಜಯಪುರದಲ್ಲಿ ಮಾತನಾಡಿದ ಎಡಿಜಿಪಿ ಭಾಸ್ಕರ್​ ರಾವ್.. ಲಾಕ್​ಡೌನ್ ಬಗ್ಗೆ ಮುಂದಿನ ಆದೇಶದ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಿರ್ಧಾರ ಮಾಡಲಾಗುವುದು.. ಸರಕಾರದ ಮುಂದಿ‌ನ ಆದೇಶಕ್ಕೆ ಕಾಯುತ್ತಿದ್ದೇವೆ ಎಂದಿದ್ದಾರೆ.

ರಾಜ್ಯ ಸರ್ಕಾರದ ಲಾಕ್​ಡೌನ್ ನಿಯಮಗಳನ್ನು ಸರಿಯಾಗಿ ಜಾರಿ ಮಾಡಲಾಗಿದೆ.. ಉತ್ತರ ವಲಯದಲ್ಲಿ ನಿಯಮಗಳ ಪಾಲನೆಯಾಗಿದೆ ಅಂತಾ ಪರಿಶೀಲನೆ ನಡೆಸುತ್ತೇನೆ.. ಕಳೆದ ನಾಲ್ಕು ದಿನಗಳಿಂದ ಉತ್ತರ ವಲಯದ ಜಿಲ್ಲೆಗಳಲ್ಲಿ ಪರಿಶೀಲನೆ ಮಾಡುತ್ತಿದ್ದೇನೆ.. ಸರ್ಕಾರದ ಸೂಚನೆಗಳು ಜಿಲ್ಲಾ ಮಟ್ಟದಲ್ಲಿ ಕಟ್ಟುನಿಟ್ಟಾಗಿ ಮಾನವಿಯತೆ ಗಮನದಲ್ಲಿಟ್ಟುಕೊಂಡು ಮಾಡಬೇಕು.

ಕಾಳ ಸಂತೆಯಲ್ಲಿ ಔಷಧಿ ಇಂಜೆಕ್ಷನ್ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.. ಜ‌ನರು ಯಾವುದೇ ಕಾರಣಕ್ಕೂ ಭಯದಿಂದ ಇರಬಾರದು.. ಜನರ ಮೇಲೆ ಬಲಪ್ರಯೋಗ ಮಾಡಬಾರದು.. ಮಾನವೀಯತೆ ಜೊತೆಗೆ ಸರ್ಕಾರದ ನಿಯಮ ಪಾಲನೆ ಮಾಡಬೇಕು.. ಸಾಮಾಜಿಕ ಜಾಲತಾಣದಲ್ಲಿ ವ್ಯಾಕ್ಸಿನ ಬಗ್ಗೆ ಅಪಪ್ರಚಾರ ಮಾಡಬಾರದು.. ಎಲ್ಲರೂ ವ್ಯಾಕ್ಸಿನೇಷನ್‌ ಹಾಕಿಸಿಕೊಳ್ಳಬೇಕು.

ಮಹಾರಾಷ್ಟ್ರದಿಂದ ಇಲ್ಲಿಗೆ ಹೆಚ್ಚಿನ ಜನರು ಆಗಮಿಸುತ್ತಿದ್ದಾರೆ. ಆಸ್ಪತ್ರೆಯ ಕಾರಣದಿಂದಾಗಿ ಇಲ್ಲಿಗೆ ಮಹಾರಾಷ್ಟ್ರದಿಂದ ಆಗಮಿಸುತ್ತಿದ್ದಾರೆ. ವಿಜಯಪುರ ಜಿಲ್ಲೆಗೆ ಮಹಾರಾಷ್ಟ್ರದಿಂದ ಬರುವಾಗ ಟೆಸ್ಟ್ ಮಾಡಿಸಿಕೊಂಡು ಬರಬೇಕು. ಗಡಿಯಲ್ಲಿ ಹೆಚ್ಚಿನ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜನರಿಗೆ ಜಾಗೃತಿ ಮೂಡಿಸಿ ಕೋವಿಡ್ ವಿರುದ್ಧ ಹೋರಾಡಲು ಕ್ರಮ ಕೈಗೊಳ್ಳಲಾಗುವುದು. ಎಂದು ಇದೇ ವೇಳೆ ಎಡಿಜಿಪಿ ಭಾಸ್ಕರ್ ರಾವ್ ಹೇಳಿಕೆ ನೀಡಿದ್ದಾರೆ.

The post ಲಾಕ್​ಡೌನ್​ ಕುರಿತು ಮುಂದಿನ ಆದೇಶಕ್ಕೆ ಕಾಯುತ್ತಿದ್ದೇವೆ- ಭಾಸ್ಕರ್ ರಾವ್ appeared first on News First Kannada.

Source: News First Kannada
Read More