ಬೆಂಗಳೂರು: ಕೊರೊನಾ ನಿಯಂತ್ರಣ ಹಾಗೂ ಮಕ್ಕಳ ಮೇಲೆ ಭಾರೀ ಪರಿಣಾಮ ಬೀರಲಿದೆ ಎನ್ನಲಾದ ಮೂರನೇ ಅಲೆ ಎದುರಿಸುವ ಬಗ್ಗೆ ಚರ್ಚಿಸಲು ಇಂದು ಸಿಎಂ ಬಿ.ಎಸ್​ ಯಡಿಯೂರಪ್ಪ ಎರಡು ಪ್ರತ್ಯೇಕ ಸಭೆ ನಡೆಸಲಿದ್ದಾರೆ.

ರಾಜ್ಯದಲ್ಲಿ ಅಕ್ಟೋಬರ್​ ಅಥವಾ ನವೆಂಬರ್​ನಲ್ಲಿ ಬರಬಹುದಾದ ಮೂರನೇ ಅಲೆ ತಡೆಯುವ ಬಗ್ಗೆ ವರದಿ ನೀಡಲು ರಚಿಸಿರುವ ಡಾ.ದೇವಿಪ್ರಸಾದ್​ ಶೆಟ್ಟಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಜೊತೆ ಸಿಎಂ ಇಂದು ವರ್ಚ್ಯೂವಲ್​ ಸಭೆ ನಡೆಸಲಿದ್ದಾರೆ. ಬಳಿಕ ಲಾಕ್​ಡೌನ್​ ವಿಸ್ತರಣೆ ಕುರಿತು ತಜ್ಞರ ಸಲಹೆ ಆಧಾರದಲ್ಲಿ ಚರ್ಚೆ ನಡೆಯಲಿದೆ.

The post ಲಾಕ್​ಡೌನ್​, ಕೊರೊನಾ 3ನೇ ಅಲೆ ಬಗ್ಗೆ ಇಂದು ಸಿಎಂ ಸಭೆ appeared first on News First Kannada.

Source: newsfirstlive.com

Source link