ಬೆಂಗಳೂರು: ನಗರದಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಲಾಕ್​ಡೌನ್​ ಮಾಡಬಹುದೆಂದು ಹೆದರಿದ ಜನರು, ಸಿಲಿಕಾನ್​ ಸಿಟಿ ಬಿಟ್ಟು ತಮ್ಮ ಊರುಗಳತ್ತ ತೆರಳಲು ಮುಂದಾಗುತ್ತಿದ್ದಾರೆ.

ನಗರದಲ್ಲಿ ಕೊರೊನಾ 2ನೇ ಅಲೆಯ ಅಬ್ಬರ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಈ ಕಾರಣದಿಂದಾಗಿ ಸರ್ಕಾರ ಬಿಗಿ ಕ್ರಮಕ್ಕೆ ಮುಂದಾಗುತ್ತಿದೆ. ಇದೇ ಕಾರಣದಿಂದಾಗಿ ಏಪ್ರಿಲ್​ 24 ಮತ್ತು 25 ರಂದು 2 ದಿನಗಳ ವೀಕೆಂಡ್​ ಕರ್ಫ್ಯೂ ಸಹ ಜಾರಿ ಮಾಡಿತ್ತು. ಆದರೂ ಸಹ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿಲ್ಲ. ಈ ಸಂಬಂಧ ಇಂದು ಸಚಿವ ಸಂಪುಟದ ಸಭೆ ನಡೆಸಲಾಗಿದೆ. ಹೀಗಾಗಿ ಲಾಕ್​ಡೌನ್​ ಹೇರಬಹುದು ಎಂಬ ಭಯದಿಂದಾಗಿ ಜನರು ನಗರವನ್ನ ತೊರೆಯುತ್ತಿದ್ದಾರೆ.

ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಈಗಾಗಲೇ ತಮ್ಮ ಊರುಗಳಿಗೆ ಹೊರಟಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಹಾಗೂ ಬಸ್​ ನಿಲ್ದಾಣಗಳಲ್ಲಿ ಜನರು ತುಂಬಿ ತುಳುಕಾಡುತ್ತಿದ್ದಾರೆ.

The post ಲಾಕ್​ಡೌನ್​ ಭಯಕ್ಕೆ ಬೆಂಗಳೂರು ತೊರೆಯಲು ಮುಂದಾದ ಜನ; ಬಸ್​ ನಿಲ್ದಾಣಗಳು ಫುಲ್​ ರಷ್​ appeared first on News First Kannada.

Source: News First Kannada
Read More