ಬೆಂಗಳೂರು: ಲಾಕ್​​ಡೌನ್​ ವೇಳೆ ರಾಜ್ಯದ ಪೊಲೀಸ್ ಅಧಿಕಾರಿಗಳು ಸೀಜ್ ಮಾಡಿರುವ ವಾಹನಗಳನ್ನ ರಿಲೀಸ್​ ಮಾಡಲು ಹೈಕೋರ್ಟ್​ ಗ್ರೀನ್ ಸಿಗ್ನಲ್ ನೀಡಿದೆ.

ಈಗಾಗಲೇ ಸೀಜ್ ಮಾಡಿರುವ ವಾಹನಗಳ ಮಾಲೀಕರಿಂದ ದಂಡ ಕಟ್ಟಿಸಿಕೊಂಡು ಬಿಟ್ಟುಕೊಡಿ. ವಾಹನ ರಿಲೀಸ್​ಗಾಗಿ ಜನರು ಕೋರ್ಟ್​ಗೆ ಓಡಾಡುವ ಅಗತ್ಯವಿಲ್ಲ ಎಂದಿರುವ ಹೈಕೋರ್ಟ್​, ಪೊಲೀಸರಿಗೇ ವಾಹನ ರಿಲೀಸ್ ಮಾಡುವ ಅಧಿಕಾರವನ್ನ ನೀಡಿದೆ.

ಲಾಕ್​ಡೌನ್​ನಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿ ವಾಹನಗಳನ್ನ ಸೀಜ್​ ಮಾಡಿದ್ದರು. ರಾಜ್ಯಾದ್ಯಂತ ಲಕ್ಷಾಂತರ ವಾಹನಗಳು ಸೀಜ್ ಆಗಿದ್ದ ಹಿನ್ನೆಲೆಯಲ್ಲಿ ಅವುಗಳನ್ನ ಸೂಕ್ತ ಸ್ಥಳದಲ್ಲಿ ನಿಲ್ಲಿಸುವುದು ಸಮಸ್ಯೆಯಾಗಿತ್ತು.

ಹೀಗಾಗಿ ಸೂಕ್ತ ನಿರ್ದೇಶನ ಕೋರಿ ರಾಜ್ಯ ಸರ್ಕಾರ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್, ವಾಹನಗಳ ರಿಲೀಸ್​ಗೆ ಅವಕಾಶ ಮಾಡಿಕೊಟ್ಟಿದೆ. ಹೈಕೋರ್ಟ್​ನ ಆದೇಶದಂತೆ ನಾಳೆಯಿಂದಲೇ ಪೊಲೀಸರು ವಾಹನ ರಿಲೀಸ್ ಮಾಡುವ ಸಾಧ್ಯತೆ ಇದೆ.

The post ಲಾಕ್​ಡೌನ್​ ವೇಳೆ ಸೀಜ್ ಆಗಿದ್ದ ವಾಹನಗಳ ರಿಲೀಸ್​​ಗೆ ಗ್ರೀನ್​​ಸಿಗ್ನಲ್ appeared first on News First Kannada.

Source: newsfirstlive.com

Source link