ಬೆಂಗಳೂರು: ಕೊರೊನಾ ಎರಡನೇ ಅಲೆಯ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿ ಮಾಡಿದ್ದ ಲಾಕ್​​ಡೌನ್​ ಜೂನ್​​ 7ಕ್ಕೆ ಅಂತ್ಯವಾಗಲಿದೆ. ಆ ಬಳಿಕ ಆನ್​ಲಾಕ್​ ಪ್ರಕ್ರಿಯೆ ಆರಂಭವಾಗುವುದು ನಿಶ್ಚಿತ ಎಂದು ಉಪಮುಖ್ಯಮಂತ್ರಿ ಡಾ.ಸಿ. ಎನ್.ಅಶ್ವತ್ಥ್‌ ನಾರಾಯಣ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಜೂನ್ 7ರಿಂದ ಆನ್​​ಲಾಕ್​​ ಆಗೋದು ನಿಶ್ಚಿತ. ಆದರೆ ಯಾವ ಯಾವ ಕ್ಷೇತ್ರದಲ್ಲಿ ಹೇಗೆ ಆನ್‌ಲಾಕ್ ಆಗುತ್ತದೆ ಎಂಬುದನ್ನು ಕಾದು ನೋಡಬೇಕು. ಆದರೆ ಒಮ್ಮೆಲೆ ಪೂರ್ಣ ಪ್ರಮಾಣದಲ್ಲಿ ಅನ್‌ಲಾಕ್ ಮಾಡೋದಕ್ಕೆ ಆಗುವುದಿಲ್ಲ. ಹಂತ ಹಂತವಾಗಿ ಮಾಡಬೇಕಾಗುತ್ತದೆ. ಹೇಗೆ ಮಾಡಬೇಕು ಎಂಬುದರ ಬಗ್ಗೆ ತಜ್ಞರ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದರು.

ವಿದೇಶಿ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಅವರಿಗಾಗಿ ಪ್ರತ್ಯೇಕ ವ್ಯಾಕ್ಸಿನ್​ ಕೇಂದ್ರವನ್ನು ತೆರೆಯಲಾಗಿದೆ. ಕೋವಿಶೀಲ್ಡ್ ಲಸಿಕೆ ನೀಡಲಾಗುತ್ತದೆ. ಕೋವ್ಯಾಕ್ಸಿನ್‌ಗೆ ವಿದೇಶಗಳಲ್ಲಿ ನಿಷೇಧ ಇರುವ ಬಗ್ಗೆ ನಾವೇನು ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಬ್ಲಾಕ್ ಫಂಗಸ್‌ಗೆ ಔಷಧದ ಕೊರತೆ ಇರುವುದು ನಿಜ. ಅದಕ್ಕೆ ಪರ್ಯಾಯ ಔಷಧಗಳೂ ಇವೆ. ಅವುಗಳನ್ನು ಬಳಸಿ ಜೀವ ರಕ್ಷಣೆ ಮಾಡಬಹುದು ಎಂದರು.

ಬಿ.ವೈ.ವಿಜಯೇಂದ್ರ ದೆಹಲಿಗೆ ಪ್ರಯಾಣದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಯಾವ ಕಾರಣಕ್ಕೆ ವಿಜಯೇಂದ್ರ ದೆಹಲಿಗೆ ಹೋಗಿದ್ದಾರೋ ಗೊತ್ತಿಲ್ಲ. ಬಹುಶಃ ವೈಯಕ್ತಿಕ ಕಾರಣಕ್ಕೆ ಹೋಗಿರಬಹುದು.

The post ಲಾಕ್​ಡೌನ್​ ಸಡಿಲಿಕೆ ಬಗ್ಗೆ ಕನ್ಫರ್ಮ್ ಮಾಡಿದ ಅಶ್ವತ್ಥ್ ನಾರಾಯಣ್.. ಯಾವ ಕ್ಷೇತ್ರದಲ್ಲಿ ಅನ್​ಲಾಕ್​? appeared first on News First Kannada.

Source: newsfirstlive.com

Source link