ರಾಜ್ಯಾದ್ಯಂತ ಸೋಮವಾರದಿಂದ ಲಾಕ್ಡೌನ್ ಜಾರಿಯಾಗಲಿದೆ . ಈ ಹಿನ್ನೆಲೆ, ರಾಜ್ಯದ ನಾನಾ ಭಾಗಗಳಲ್ಲಿ ಎಣ್ಣೆಪ್ರಿಯರು ಇಂದಿನಿಂದಲೇ ಮದ್ಯ ಖರೀದಿಗೆ ಮುಗಿಬಿದ್ದಿದ್ದಾರೆ.

14ದಿನಗಳ ಲಾಕ್​ಡೌನ್​ ಘೋಷಣೆ ಆಗಿದ್ದೇ ಆಗಿದ್ದು ಬೆಳಗಾವಿ, ಧಾರವಾಡ, ಕಲಬುರಗಿಯಲ್ಲಿ ಮದ್ಯ ಪ್ರಿಯರು ಕೊರೊನಾಗೆ ಕ್ಯಾರೇ ಅನ್ನದೇ ಕ್ಯೂ ನಿಂತು ಮದ್ಯವನ್ನ ಖರೀದಿಸಿದ್ದಾರೆ. ಮುಂದಿನ 14 ದಿನಗಳ ಕಾಲ ಮದ್ಯ ಸಿಗೋದು ಅನುಮಾನವಿರೋ ಹಿನ್ನೆಲೆಯಲ್ಲಿ ಬಾಕ್ಸ್​​ಗಟ್ಟಲೇ ಮದ್ಯ ಖರೀದಿ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲದೇ ದಿನಬಳಕೆ ಸಾಮಗ್ರಿಗಳನ್ನ ಖರೀದಿಸಲು ಜನ ಮುಗಿಬಿದ್ದಿದ್ದು, ತಮಗೆ ಬೇಕಾಗಿರೋ ವಸ್ತುಗಳನ್ನ ವಾರಕ್ಕೆ ಆಗುವಷ್ಟು ಖರೀದಿ ಮಾಡ್ತಿದ್ದಾರೆ.

The post ಲಾಕ್​ಡೌನ್​ ಹಿನ್ನೆಲೆ ಮದ್ಯ ಖರೀದಿಗೆ ಮುಗಿಬಿದ್ದ ಎಣ್ಣೆಪ್ರಿಯರು appeared first on News First Kannada.

Source: newsfirstlive.com

Source link