ಬೆಂಗಳೂರು: ಸೋಮವಾರದಿಂದ ರಾಜ್ಯದಲ್ಲಿ ಲಾಕ್​ಡೌನ್ ಜಾರಿಯಾಗಲಿರೋ​ ಹಿನ್ನೆಲೆ ಜನರು ತಮ್ಮ ಊರುಗಳತ್ತ ಪ್ರಯಾಣ ಬೆಳೆಸುತ್ತಿದ್ದಾರೆ.

ಬೆಂಗಳೂರಿನ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಬೆಳಗ್ಗೆಯಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ರೈಲುಗಳ ಮೂಲಕ ತಮ್ಮ-ತಮ್ಮ ಊರುಗಳಿಗೆ ಜನರು ತೆರಳುತ್ತಿದ್ದಾರೆ. ಅನೇಕ ಮಂದಿ ಗಂಟು-ಮೂಟೆ ಸಮೇತ ಬೆಂಗಳೂರು ತೊರೆಯುತ್ತಿರೋದು ಕಂಡುಬರ್ತಿದೆ.

ಇನ್ನು ರೈಲು ಮಾತ್ರವಲ್ಲದೆ ಸ್ವಂತ ವಾಹನಗಳಲ್ಲೂ ಜನರು ಸಿಲಿಕಾನ್​ ಸಿಟಿಯಿಂದ ತಮ್ಮ ಊರುಗಳತ್ತ ಹೋಗ್ತಿದ್ದಾರೆ. ಈ ಹಿನ್ನೆಲೆ ನವಯುಗ ಟೋಲ್ ಬಳಿ ಟ್ರ್ಯಾಫಿಕ್ ಜಾಮ್ ಉಂಟಾಗಿದೆ. ಲಾಕ್​ಡೌನ್ ಜಾರಿಗೂ ಮುನ್ನ ಊರು ಸೇರಿಕೊಳ್ಳಲು, ನೂರಾರು ಮಂದಿ ಬೆಂಗಳೂರು ಬಿಡುತ್ತಿದ್ದಾರೆ.

 

The post ಲಾಕ್​ಡೌನ್ ಘೋಷಣೆ ಬೆನ್ನಲೆ, ಬೆಂಗಳೂರು ತೊರೆಯುತ್ತಿರೋ ಜನ, ನವಯುಗ ಟೋಲ್ ಬಳಿ ಟ್ರಾಫಿಕ್ appeared first on News First Kannada.

Source: newsfirstlive.com

Source link