ಬೆಂಗಳೂರು: ನಿನ್ನೆಯಿಂದ ನಗರದಲ್ಲಿ ಲಾಕ್​ಡೌನ್ ಮತ್ತಷ್ಟು ಬಿಗಿಗೊಳಿಸಲಾಗಿದೆ. ಸಣ್ಣ ಪುಟ್ಟ ಕಾರಣ ಹೇಳಿಕೊಂಡು ಅನಗತ್ಯವಾಗಿ ಓಡಾಡುತ್ತಿರುವವರ ವಾಹನಗಳನ್ನ ಪೊಲಿಸರು ಸೀಜ್ ಮಾಡ್ತಿದ್ದಾರೆ. ಜೊತೆಗೆ ಎನ್​ಡಿಎಂಎ ಅಡಿ ಪ್ರಕರಣ ದಾಖಲಿಸುತ್ತಿದ್ದಾರೆ.

ಇಂದು ಕೂಡ ಬೆಳ್ಳಂಬೆಳಗ್ಗೆ ಫೀಲ್ಡಿಗಿಳಿದಿರುವ ಪೊಲೀಸರು, ಪ್ರತಿಯೊಂದು ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಬೆಳಗ್ಗೆ 6ರಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಲಾಗಿದೆ. ಆದ್ರೆ ಕೆಲವ್ರು ಸುಖಾಸುಮ್ಮನೆ ವಾಹನದಲ್ಲಿ ಓಡಾಡುತ್ತಿರೋದು ಕಂಡುಬಂದಿದ್ದು, ಅಂಥವರ ವಾಹನಗಳನ್ನ ಸೀಜ್ ಮಾಡುತ್ತಿದ್ದಾರೆ. ಆಡುಗೋಡಿ ಬಳಿ ಪೊಲೀಸ್ ಡ್ಯೂಟಿಗೆ ಹೋಗ್ತಿದ್ದವರನ್ನೂ ತಡೆದು ನಿಲ್ಲಿಸುತ್ತಿರೋ ಪೊಲೀಸರು, ಡ್ಯೂಟಿ ಸಮಯ ಕೇಳಿ ನಂತರ ಬಿಡುತ್ತಿದ್ದಾರೆ. ಪ್ರತಿಯೊಬ್ಬರ ಕಾಂಟ್ಯಾಕ್ಟ್ ನಂಬರ್ ಪಡೆದು ಕಳಿಸುತ್ತಿದ್ದಾರೆ.

ಕೆಲವ್ರು ಸುಖಾಸುಮ್ಮನೆ ಬ್ಯಾಗ್ ತಂದು ತೋರಿಸ್ತಿದ್ದಾರೆ. ಅಂಥವರನ್ನ ಹಿಡಿದು ಪೊಲೀಸರು ಎಚ್ಚರಿಕೆ‌ ಕೊಡುತ್ತಿದ್ದಾರೆ. ಇನ್ನು ತಪಾಸಣೆ ಹೇಗೆ ನಡೆಯುತ್ತಿದೆ ಅಂತ ವೀಕ್ಷಿಸಲು ಇಂದು ಬೆಳಗ್ಗೆ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಷಿ  ಸ್ಥಳಕ್ಕಾಗಮಿಸಿದರು. ಈ ವೇಳೆ ಖುದ್ದು ತಾವೇ ತಪಾಸಣೆ ನಡೆಸಿದ್ರು. ಪ್ರತಿಯೊಂದು ವಾಹನಗಳನ್ನ ತಡೆದು ನಿಲ್ಲಿಸಿ ಪರಿಶೀಲನೆ ಮಾಡಿದ್ರು. ಈ ವೇಳೆ ದುಬಾರಿ ಜಾಗ್ವಾರ್ ಕಾರ್​ವೊಂದನ್ನ ಡಿಸಿಪಿ ಸೀಜ್ ಮಾಡಿದರು.

ಸರ್ ಇಲ್ಲೆ ಸರ್ ಎರಡು ನಿಮಿಷ‌.. ಪಕ್ಕದ ರೋಡಿಗೆ ಹೋಗ್ತಿದ್ದೀನಿ  ಅಂತ ಕಾರ್​ ಚಾಲಕ ವಿನಂತಿಸಿದ್ರು. ಪಕ್ಕದ ರೋಡ್ ಅಂದ್ರೆ ನಿನ್ನ ಪಕ್ಕನಾ.. ಯಾವ ಪಕ್ಕದ್ ರೋಡ್.. ಸರಿ ಒಂದೇ ನಿಮಿಷ ಪಕ್ಕದಲ್ಲಿರು ಗಾಡಿ ಸೀಜ್ ಮಾಡ್ತೀವಿ ಅಂತ ಕೀ ಪಡೆದು ಡಿಸಿಪಿ ಗಾಡಿ ಸೀಜ್ ಮಾಡಿದರು.

The post ಲಾಕ್​ಡೌನ್ ಬಿಗಿ: ಖುದ್ದು ಫೀಲ್ಡಿಗಳಿದು ಜಾಗ್ವಾರ್ ಕಾರ್ ಸೀಜ್ ಮಾಡಿದ ಡಿಸಿಪಿ ಶ್ರೀನಾಥ್ appeared first on News First Kannada.

Source: newsfirstlive.com

Source link