ಬೆಂಗಳೂರು: ನಗರದಲ್ಲಿ ಲಾಕ್​ಡೌನ್​ ನಿಯಮಗಳನ್ನ ಮತ್ತಷ್ಟು ಕಠಿಣಗೊಳಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ 10ರವರೆಗೆ ಮಾತ್ರ ಅಗತ್ಯವಸ್ತುಗಳ ಖರೀದಿಗೆ ಅವಕಾಶ ಬಿಟ್ಟರೆ, ಉಳಿದಿದ್ದೆಲ್ಲಾ ಬಹುತೇಕ ಬಂದ್​ ಆಗಿದೆ.  ಹತ್ತು ಗಂಟೆ ನಂತರ ಅನಗತ್ಯವಾಗಿ ಓಡಾಡ್ತಿರೋರ ಗಾಡಿಗಳನ್ನ ಸೀಜ್ ಮಾಡುವಂತೆ ಸೂಚನೆ ನೀಡಲಾಗಿದೆ.

ಸದ್ಯ ರಸ್ತೆಗಿಳಿದಿರೋ ಪೊಲೀಸ್ ಅಧಿಕಾರಿಗಳು, ಪ್ರತೀ ಗಾಡಿಗಳನ್ನ ಚೆಕ್ ಮಾಡಿ ಬಿಡ್ತಿದ್ದಾರೆ. ಕುಂಟು ನೆಪ ಹೇಳಿಕೊಂಡು ಓಡಾಡುತ್ತಿರುವವರ ಗಾಡಿಗಳನ್ನ ಸೀಜ್​ ಮಾಡ್ತಿದ್ದಾರೆ. ಕಾರ್ಪೋರೇಷನ್ ಬಳಿ ಇಂದು 13ಕ್ಕೂ ಹೆಚ್ಚು ಗಾಡಿಗಳನ್ನ ಸೀಜ್ ಮಾಡಿದ್ದಾರೆ. ಅನಗತ್ಯವಾಗಿ ಓಡಾಡುವವರನ್ನ ವಶಕ್ಕೆ ಪಡೆದು ಜೀಪ್ ಹತ್ತಿಸಿದ್ದಾರೆ.

ಕೇಂದ್ರ ವಿಭಾಗದ ಡಿಸಿಪಿ ಅನುಚೇತನ್ ಸ್ವತಃ ಫಿಲ್ಡ್​ಗಿಳಿದು ಚೆಕ್ ಮಾಡ್ತಿದ್ದಾರೆ. ಯಾರಿಗೆ ಅಗತ್ಯ ಇದೆಯೋ ಅವ್ರು ಮಾತ್ರ ಹೊರಗೆ ಬನ್ನಿ. ನಾವು ಇವತ್ತಿನಿಂದ ಗಾಡಿ ಸೀಜ್ ಮಾಡೋದ್ರ ಜೊತೆಗೆ ಕೇಸ್ ಬುಕ್ ಮಾಡ್ತೀವಿ ಎಂದು ಅವರು ಹೇಳಿದ್ದಾರೆ.

ಇದುವರೆಗೂ 13 ಗಾಡಿಗಳನ್ನ ಸೀಜ್‌ ಮಾಡಿದ್ದೀವಿ. 7 ಜನರನ್ನ ವಶಕ್ಕೆ ಪಡೆದಿದ್ದೇವೆ. ಗಾಡಿಗಳನ್ನ‌ ಬಿಡಿಸಿಕೊಳ್ಳೋಕೆ ನ್ಯಾಯಾಲಯಕ್ಕೇ ಹೋಗಬೇಕು. ಹತ್ತು ಗಂಟೆ ನಂತರ ಒಂದು ನಿಮಷ ಅಂಗಡಿಗಳನ್ನ ಓಪನ್ ಮಾಡಿದ್ರೂ ಓನರ್ ಮೇಲೆ ಕೇಸ್ ದಾಖಲು ಮಾಡಲಾಗುತ್ತೆ. ಅವರ ವಿರುದ್ಧವೂ ಕ್ರಿಮಿನಲ್ ಕೇಸ್ ದಾಖಲಾಗುತ್ತೆ ಅಂತ ಡಿಸಿಪಿ ಅನುಚೇತ್ ಎಚ್ಚರಿಕೆ ನೀಡಿದ್ದಾರೆ.

 

The post ಲಾಕ್​ಡೌನ್ ಮತ್ತಷ್ಟು ಬಿಗಿ: 13 ಗಾಡಿಗಳು ಜಪ್ತಿ, 7 ಜನರನ್ನ ವಶಕ್ಕೆ ಪಡೆದ ಪೊಲೀಸ್​ appeared first on News First Kannada.

Source: newsfirstlive.com

Source link