ಲಾಕ್​ಡೌನ್ ವೇಳೆ ಸದ್ದಿಲ್ಲದೆ ದಂಧೆಕೋರರ ಪಾಲಾಗ್ತಿದೆ ಬಡವರ ಅನ್ನಭಾಗ್ಯ ಅಕ್ಕಿ

ಲಾಕ್​ಡೌನ್ ವೇಳೆ ಸದ್ದಿಲ್ಲದೆ ದಂಧೆಕೋರರ ಪಾಲಾಗ್ತಿದೆ ಬಡವರ ಅನ್ನಭಾಗ್ಯ ಅಕ್ಕಿ

ಕೊಪ್ಪಳ: ಜಿಲ್ಲೆಯಲ್ಲಿ ಅಧಿಕಾರಿಗಳು ಕೊರೊನಾ ನಿರ್ಮೂಲನೆಯ ಕಾರ್ಯದಲ್ಲಿ ತಲ್ಲಿನರಾಗಿದ್ರೆ, ಇತ್ತ ಸದ್ದಿಲ್ಲದೆ ಅನ್ನಭಾಗ್ಯ ಅಕ್ಕಿಯ ಕಳ್ಳದಂಧೆ ನಡೆಯುತ್ತಿದೆ. ಬಡವರಿಗೆ ತಲುಪಬೇಕಾದ ಅಕ್ಕಿ ದಂಧೆಕೋರರ ಪಾಲಾಗುತ್ತಿದೆ.

ಲಾಕ್​ಡೌನ್ ವೇಳೆ ಕೊರೊನಾ ಕರ್ತವ್ಯದಲ್ಲಿರುವ ಅಧಿಕಾರಿಗಳ ಕಣ್ಣತಪ್ಪಿಸಿ, ಗಲ್ಲಿಗಲ್ಲಿ ಹಾಗೂ ಬಡಾವಣೆಗಳಲ್ಲಿ ಅನ್ನಭಾಗ್ಯ ಅಕ್ಕಿ ತುಂಬಿಸಿಕೊಳ್ಳುತ್ತಿದ್ದಾರೆ ದಂಧೆಕೋರರ ಕುಳಗಳು. ಕೆಲ ಮಧ್ಯವರ್ಗದ ಬಿಪಿಎಲ್ ಕಾರ್ಡ್​​​ ಹೊಂದಿರುವ ಮನೆ ಮಂದಿ ಅನ್ನಭಾಗ್ಯ ಅಕ್ಕಿಯನ್ನ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ದಂಧೆಕೋರರು ಮನೆ ಮನೆಗೆ ಬಂದು ಪ್ಲಾಸ್ಟಿಕ್ ಚೀಲಗಳಲ್ಲಿ ಈ ಅಕ್ಕಿಯನ್ನ ತುಂಬಿಸಿಕೊಂಡು, ಮೂಟೆಗಳನ್ನು ಮಾಡಿ ಆಟೋದಲ್ಲಿ ಸಾಗಿಸುತ್ತಿದ್ದಾರೆ. ಹೀಗೆ ನಿರ್ಭಯವಾಗಿ ಅಕ್ಕಿ ಖರೀದಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ.

The post ಲಾಕ್​ಡೌನ್ ವೇಳೆ ಸದ್ದಿಲ್ಲದೆ ದಂಧೆಕೋರರ ಪಾಲಾಗ್ತಿದೆ ಬಡವರ ಅನ್ನಭಾಗ್ಯ ಅಕ್ಕಿ appeared first on News First Kannada.

Source: newsfirstlive.com

Source link