ಸ್ಯಾಂಡಲ್​ವುಡ್​ನಲ್ಲಿ ಮುಂಚೂಣಿಯಲ್ಲಿರುವ ಸಾಹಸ ನಿರ್ದೇಶಕರಲ್ಲಿ ರವಿವರ್ಮ ಹೆಸರು ಅಗ್ರಸ್ಥಾನದಲ್ಲಿದೆ. ತಮ್ಮ ಸ್ಟಂಟ್​ನಿಂದ ಹೀರೋಗಳ ಆ್ಯಕ್ಷನ್​ ಸೀಕ್ವೆನ್ಸ್​​ ಅಭಿಮಾನಿಗಳ ಕಣ್ಮುಟ್ಟುವಂತೆ ಮಾಡುವ ರವಿವರ್ಮ, ಇದೀಗ ರಿಯಲ್​ ಲೈಫ್​ ಹೀರೋ ಆಗಿದ್ದಾರೆ. ಹೌದು.. ಕೆಲಸ ಇಲ್ಲದೇ ಕಷ್ಟದಲ್ಲಿರುವ 350 ಕ್ಕೂ ಹೆಚ್ಚು ಸಾಹಸ ಕಲಾವಿದರಿಗೆ ದಿನಸಿ ಕಿಟ್ ನೀಡಲು ತಯಾರಿ ಮಾಡಿಕೊಳ್ತಿದ್ದಾರೆ. ಇನ್ನು ಕಳೆದ ಒಂದು ತಿಂಗಳಿನಿಂದ ಬಿಡದಿಯಲ್ಲಿರುವ ತಮ್ಮ ಜಮೀನಿನಲ್ಲಿ ರವಿವರ್ಮ ವ್ಯವಸಾಯ ಮಾಡ್ತಿದ್ದಾರೆ.

ರಾಜ್ಯದಲ್ಲಿ ಕೊರೊನಾ ಕಾರಣ ಲಾಕ್​​ಡೌನ್​ ಹೇರಲಾಗಿದ್ದು, ಚಿತ್ರರಂಗ ಕೂಡ ಸ್ತಬ್ಧವಾಗಿದೆ. ಇದೇ ಸಂದರ್ಭ ಬಿಡದಿ ತೆರಳಿರುವ ರವಿವರ್ಮ, ಗುದ್ದಲಿ ಹಿಡಿದು ತೋಟದ ಕೆಲಸದಲ್ಲಿ ನಿರತರಾಗಿದ್ದಾರೆ. ತಾವೇ ಖುದ್ದು ಜಮೀನಿನನ್ನ ಅಗೆದು ತೋಟವನ್ನ ಸರಿ ಪಡಿಸುತ್ತಿದ್ದಾರೆ. ಅಂತೂ ಈ ಲಾಕ್​ಡೌನ್​ನಲ್ಲಿ ಮತ್ತೋರ್ವ ಸ್ಯಾಂಡಲ್​ವುಡ್​ ಸದಸ್ಯ ರೈತರಾಗಿ ಬದಲಾಗಿದ್ದಾರೆ.

ಇನ್ನು ಕನ್ನಡ ಮಾತ್ರವಲ್ಲದೇ ತೆಲುಗು, ಹಿಂದಿ ಹಾಗೂ ತಮಿಳಿನ ಸ್ಟಾರ್​ ನಟರಿಗೂ ಸ್ಟಂಟ್​ ಮಾಸ್ಟರ್​​ ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ. ಸದ್ಯ ಅವರದ್ದೇ ಒಂದು ಸ್ಕ್ರಿಪ್ಟ್​​ ರೆಡಿ ಮಾಡ್ಕೊಳ್ತಿರುವ ರವಿವರ್ಮ, ಆ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ.

The post ಲಾಕ್​​ಡೌನ್​ನಲ್ಲಿ ರೈತರಾದ ಸ್ಟಾರ್ ಸ್ಟಂಟ್ ಮಾಸ್ಟರ್ ರವಿವರ್ಮ appeared first on News First Kannada.

Source: newsfirstlive.com

Source link