ಬೆಂಗಳೂರು: ಕೊರೊನಾ ಎರಡನೇ ಅಲೆಯ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಲಾಕ್​ಡೌನ್​ ಜಾರಿ ಮಾಡಿ ಸಾರ್ವಜನಿಕ ಸಾರಿಗೆ ಸಂಚಾರಕ್ಕೆ ಬ್ರೇಕ್​ ಹಾಕಿದ್ದರು. ಪರಿಣಾಮ ಕಳೆದ ಹಲವು ದಿನಗಳಿಂದ ಬಸ್​​ಗಳು ನಿಂತಲೇ ನಿಂತಿದೆ. ಈ ನಡುವೆ ಡಿಪೋದಲ್ಲಿ ನಿಂತಿದ್ದ ಬಸ್​​​ನಲ್ಲೇ ಹಕ್ಕಿಗಳು ಗೂಡಿ ಕಟ್ಟಿ ಮೊಟ್ಟೆಗಳನ್ನ ಇಟ್ಟಿರುವ ಘಟನೆ ನಗರದ ಬಿಎಂಟಿಸಿ ಗುಂಜೂರ್ ಡಿಪೋ 41 ರಲ್ಲಿ ನಡೆದಿದೆ.

ಲಾಕ್​​ಡೌನ್ ಮುನ್ನ ಸಾರಿಗೆ ನೌಕರರ ಮುಷ್ಕರದಿಂದ 14 ದಿನಗಳ ಕಾಲ ಬಸ್​ಗಳು ನಿಂತಲ್ಲೇ ನಿಂತಿದ್ದವು. ಆ ಬಳಿಕ ಸರ್ಕಾರ ಲಾಕ್​​​ಡೌನ್ ಜಾರಿಯಾದ ಕಾರಣ ಹಲವು ವಾರಗಳಿಂದ ಸುಮಾರು 6 ಸಾವಿರ ಬಿಎಂಟಿಸಿ ಬಸ್​​ಗಳು ನಿಂತಲಲ್ಲೇ ನಿಂತಿದೆ. ಸದ್ಯ ರಾಜ್ಯದಲ್ಲಿ ಅನ್​​ಲಾಕ್ ಪ್ರತಿಕ್ರಿಯೆ ಆರಂಭವಾದರೂ ಸಾರ್ವಜನಿಕರ ಸಾರಿಗೆ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿಲ್ಲ. ಇನ್ನು ಜೂನ್ 21ರಿಂದ ಅನ್​​ಲಾಕ್​ 2.0ಗೆ ಚಿಂತನೆ ನಡೆಸುತ್ತಿರುವ ಸರ್ಕಾರ ಸಾರ್ವಜನಿಕರ ಸಾರಿಗೆ ಅನುಮತಿ ನೀಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ನಡುವೆ ಬಸ್​​​ಗಳ ನಿರ್ವಹಣೆಯೂ ಬಿಎಂಟಿಸಿ ಅಧಿಕಾರಿಗಳಿಗೆ ಬಹುದೊಡ್ಡ ಸವಾಲು ಆಗಿದೆ. ಸದ್ಯ ಬೆಂಗಳೂರಿನಲ್ಲಿ ತುರ್ತು ಸೇವೆ ನೀಡಲು ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿ ಸಂಚಾರ ನಡೆಸುತ್ತಿವೆ. ನಗರದ ಗುಂಜೂರ್ ಡಿಪೋ 41ದಲ್ಲಿ ಬಸ್​​ಗಳನ್ನು ಸ್ವಚ್ಚ ಮಾಡುವ ಕಾರ್ಯ ಮಾಡುವ ವೇಳೆ ಚಾಲಕ ಬಸ್​ ಹತ್ತಲು ಇರುವ ಸ್ಥಳದಲ್ಲಿ ಪಕ್ಷಿಗಳು ಗೂಡು ಕಟ್ಟಿದೆ. ಇದನ್ನು ಗಮನಿಸಿದ ಸಿಬ್ಬಂದಿ ಮೊಟ್ಟೆ ಸಮೇತ ಗೂಡನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

The post ಲಾಕ್​​ಡೌನ್​ ಎಫೆಕ್ಟ್​; ಬಿಎಂಟಿಸಿ ಬಸ್​​​​ನಲ್ಲಿ ಗೂಡುಕಟ್ಟಿ ಮೊಟ್ಟೆ ಇಟ್ಟ ಪಕ್ಷಿಗಳು appeared first on News First Kannada.

Source: newsfirstlive.com

Source link