ಚಾಮರಾಜನಗರ: ಕೊರೊನಾ ಎರಡನೇ ಅಲೆಗೆ ಬ್ರೇಕ್​ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಲಾಕ್​​ಡೌನ್ಅನ್ನು ಜೂನ್ 14ರವರೆಗೂ ವಿಸ್ತರಿಸಿದೆ. ಆದರೆ ಲಾಕ್​ಡೌನ್​ ಜಾರಿ ಇದ್ದರೂ ರಾಜಯ ಬಿಜೆಪಿ ಎಸ್​​ಟಿ ಮೋರ್ಚಾ ಉಪಾಧ್ಯಕ್ಷ ಮಲ್ಲೇಶ್​​ ಅವರು ತಮ್ಮ ಪುತ್ರನ ವಿವಾಹವನ್ನು ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಾರ್ವತಿ ಬೆಟ್ಟದಲ್ಲಿ ನೆರವೇರಿಸಿದ್ದಾರೆ.

ರಾಜ್ಯದಲ್ಲಿ ಲಾಕ್​ಡೌನ್ ಜಾರಿ ಇರುವುದರಿಂದ ಮುಜರಾಯಿ ದೇವಸ್ಥಾನದಲ್ಲಿ ಪೂಜೆ ಮಾತ್ರ ಅವಕಾಶ ನೀಡಿ, ಭಕ್ತರಿಗೆ ಪ್ರವೇಶವನ್ನು ನಿರಾಕರಸಿಲಾಗಿದೆ. ಆದರೆ ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಉಪಾಧ್ಯಕ್ಷ, ಗುಂಡ್ಲುಪೇಟೆ ಪಿ.ಎಲ್. ಡಿ ಬ್ಯಾಂಕ್ ಅಧ್ಯಕ್ಷ ಮಲ್ಲೇಶ್ ಪುತ್ರನ ಮದುವೆಯನ್ನು ಪಾರ್ವತಿ ಬೆಟ್ಟದಲ್ಲಿ ನಡೆಸಿದ್ದಾರೆ. ನಿಯಮಗಳ ಪ್ರಕಾರ ದೇವಸ್ಥಾನಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧವಿದ್ದರೂ ನಿಯಮ ಉಲ್ಲಂಘನೆ ಮಾಡಿ ಮದುವೆ ಕಾರ್ಯಕ್ರಮಕ್ಕೆ ನಡೆಸಲಾಗಿದ್ದು, ಮದುವೆಯಲ್ಲಿ 50 ಜನರು ಭಾಗಿಯಾಗಿದ್ದರು ಎಂಬ ಆರೋಪ ಕೇಳಿ ಬಂದಿದೆ.

The post ಲಾಕ್​​ಡೌನ್​ ನಿಯಮ ಉಲ್ಲಂಘನೆ; ಮುಜರಾಯಿ ದೇವಸ್ಥಾನದಲ್ಲಿ ಬಿಜೆಪಿ ಮುಖಂಡನ ಮಗನ ಮದುವೆ appeared first on News First Kannada.

Source: newsfirstlive.com

Source link