ಬೆಂಗಳೂರು: ಕೊರೊನಾ ಸೋಂಕಿನ ಹರಡುವಿಕೆಗೆ ಬ್ರೇಕ್​ ಹಾಕಲು ಸರ್ಕಾರ ಮೇ 10ರಿಂದ ಜಾರಿ ಮಾಡಿದ್ದ ಲಾಕ್​​ಡೌನ್​​ 12ನೇ ದಿನವನ್ನ ಮುಕ್ತಾಯಗೊಳಿಸಿದೆ. ಲಾಕ್​​ಡೌನ್​ ನಡುವೆಯೂ ಜನರು ನಿಯಮಗಳನ್ನು ಉಲ್ಲಂಘಿಸಿ ರೋಡ್​​ಗಿಳಿಯುತ್ತಿದ್ದಾರೆ. ಇತ್ತ ನಗರದಲ್ಲಿ ಲಾಕ್​​ಡೌನ್​ ಯಶಸ್ವಿಗೊಳಿಸಲು ಟ್ರಾಫಿಕ್ ಪೊಲೀಸರು, ಸಿವಿಲ್ ಪೊಲೀಸರು ಜಂಟಿ ಕಾರ್ಯಚರಣೆ ಮುಂದುವರಿಸಿದ್ದು ಇಂದು ಒಟ್ಟು 871 ವಾಹನಗಳನ್ನು ಸೀಜ್​ ಮಾಡಿದ್ದಾರೆ.

ಬೆಂಗಳೂರು ಪೊಲೀಸರು ನೀಡಿರುವ ಮಾಹಿತಿಯ ಅನ್ವಯ, ಇಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಡೆದ ಪೊಲೀಸರ ಕಾರ್ಯಚರಣೆಯಲ್ಲಿ ಒಟ್ಟು 871 ವಾಹನಗಳು ವಶ ಪಡೆಯಲಾಗಿದೆ. ಇದರಲ್ಲಿ 791 ದ್ವಿಚಕ್ರ ವಾಹನ, 22 ಆಟೋ, 58 ಕಾರು ಸೇರಿದೆ. ಉಳಿದಂತೆ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಎನ್​​ಡಿಎಂಎ ಕಾಯ್ದೆಯ ಅಡಿಯಲ್ಲಿ 11 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

The post ಲಾಕ್​​ಡೌನ್ ಡೇ 12; ಇಂದು ನಗರದಲ್ಲಿ 871 ವಾಹನಗಳು ಜಪ್ತಿ appeared first on News First Kannada.

Source: newsfirstlive.com

Source link