ಬೆಂಗಳೂರು: ಕೊರೊನಾ ಎರಡನೇ ಅಲೆಯ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಲಾಕ್​​ಡೌನ್ ಮೊರೆ ಹೋಗಿದ್ದು, ಕಳೆದ ಕೆಲ ದಿನಗಳಿಂದ ಪಾಸಿಟಿವ್ ಸಂಖ್ಯೆ ರಾಜ್ಯದಲ್ಲಿ ಇಳಿಮುಖವಾಗಿದೆ. ಇದರ ನಡುವೆಯೂ ರಾಜ್ಯದಲ್ಲಿ ಲಾಕ್​​ಡೌನ್ ವಿಸ್ತರಣೆ ಮಾಡುವ ಬಗ್ಗೆ ಹಲವು ಸಚಿವರು ಒಲವು ತೋರಿದ್ದಾರೆ. ಈ ನಡುವೆ ನಾಳೆ ಹಿರಿಯ ಸಚಿವರಿಂದ ವರದಿ ಪಡೆಯಲಿರುವ ಸಿಎಂ ಬಿಎಸ್​​ಯಡಿಯೂರಪ್ಪ ಅವರು ಬಳಿಕ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬೊಮ್ಮಾಯಿ ಅವರು, ನಾಳೆ ಸಿಎಂ ಹಿರಿಯರ ಸಚಿವರ ಸಭೆ ಕರೆದಿದ್ದಾರೆ. ಪ್ರಧಾನಿಗಳ ಸಭೆಯಲ್ಲಿ ಎಲ್ಲಾ ವರದಿಯನ್ನು ನೀಡಿದ್ದೇವೆ. ಪ್ರಧಾನಿಗಳು ನೇರವಾಗಿ ಜಿಲ್ಲಾಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ. ಲಾಕ್‌ಡೌನ್ ವಿಸ್ತರಣೆ ವಿಚಾರ, ಆಯಾ ರಾಜ್ಯದ ಸಿಎಂಗಳಿಗೆ ಬಿಟ್ಟಿದ್ದು. ನಾಳೆ ಹಿರಿಯ ಸಚಿವರ ಸಭೆ ಕರೆದಿರುವ ಸಿಎಂ ಟಾಸ್ಕ್‌ಫೋರ್ಸ್ ಸಮಿತಿ ಸದಸ್ಯರು ಹಾಗೂ ಮಾಧ್ಯಮಗಳ ಮಾಹಿತಿ ತರಿಸಿಕೊಳ್ಳಲಿದ್ದಾರೆ. ಬಳಿಕ ಸಿಎಂ ಲಾಕ್‌ಡೌನ್ ವಿಸ್ತರಣೆ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ನಾಳೆ 11:30 ಕ್ಕೆ ಸಿಎಂ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ತಿಳಿಸಿದರು.

The post ಲಾಕ್​​ಡೌನ್ ವಿಸ್ತರಣೆ; ನಾಳೆ ಸಿಎಂ ಮಹತ್ವದ ಸುದ್ದಿಗೋಷ್ಠಿ- ಬೊಮ್ಮಾಯಿ appeared first on News First Kannada.

Source: newsfirstlive.com

Source link