ಮೈಸೂರು: ಲಾಕ್​ಡೌನ್​ ಮಾಡಿರುವ ಸರ್ಕಾರದ ಕ್ರಮ ಸರಿಯಾಗಿದೆ ಆದರೆ ಬಡವರು ಮತ್ತು ನಿರ್ಗತಿಕರಿಗೆ ನೆರವಾಗುವ ಕಾರ್ಯಕ್ರಮಗಳನ್ನ ರೂಪಿಸಬೇಕು ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

ಲಾಕ್​ಡೌನ್​ ಸಂಬಂಧ ಇಂದು ಮೈಸೂರಿನಲ್ಲಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ ಲಾಕ್​ಡೌನ್​ ಮಾಡಿದ್ದು ಸರಿಯಾಗಿದೆ. ಆದರೆ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಬೇಕು. ನಾಳೆ ಸಂಜೆಯಿಂದ ಲಾಕ್​ಡೌನ್​ ಕಾರಿಯಾಗುವ ಕಾರಣ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಸಲಹೆ ನೀಡಿದ್ದಾರೆ.

The post ಲಾಕ್‌ಡೌನ್​ ಕ್ರಮ ಸರಿಯಾಗಿದೆ.. ಬಡವರು, ನಿರ್ಗತಿಕರಿಗೆ ನೆರವಾಗಬೇಕು -ಯತೀಂದ್ರ appeared first on News First Kannada.

Source: News First Kannada
Read More