ಬೆಂಗಳೂರು: ಕೋವಿಡ್‌ ಎರಡನೇ ಅಲೆಯ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಂತೆ, ಥಿಯೇಟರ್‌ ಮತ್ತು ಮಲ್ಟಿಪ್ಲೆಕ್ಸ್‌ಗಳಿಗೆ ಮತ್ತೆ ಪ್ರದರ್ಶನ ಬಂದ್‌ ಆಗುವ ಭೀತಿ ಎದುರಾಗಿದೆ. ಮೊದಲೇ ಕೋವಿಡ್‌ ಭಯ ಮತ್ತು 50% ಪ್ರೇಕ್ಷಕರ ಪ್ರವೇಶಾವಕಾಶ ನಿಯಮದಿಂದ ಪ್ರೇಕ್ಷಕರ ಕೊರತೆ ಎದುರಿಸುತ್ತಿರುವ ಪ್ರದರ್ಶಕರು ಮತ್ತು ನಿರ್ಮಾಪಕರು, ಈಗ ಮತ್ತೊಮ್ಮೆ ಥಿಯೇಟರ್‌, ಮಲ್ಟಿಪ್ಲೆಕ್ಸ್‌ ಗಳಲ್ಲಿ ಸಂಪೂರ್ಣ ವಾಗಿ ಸಿನಿಮಾಗಳ ಪ್ರದರ್ಶನ ಸ್ಥಗಿತವಾಗುವ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಒಂದೊಂದೇ ಸಿನಿಮಾಗಳು, ತಮ್ಮ ಪ್ರದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಮುಂದಾಗುತ್ತಿವೆ. ಇದೇ ಏ. 9 ರಂದು ತೆರೆಕಂಡಿದ್ದ “ಕೊಡೆ ಮುರುಗ’ ಚಿತ್ರದ ಪ್ರದರ್ಶನವನ್ನು, ಚಿತ್ರತಂಡ ಏಪ್ರಿಲ್‌ 12ರಿಂದ ಸ್ಥಗಿತಗೊಳಿಸಿ ಜುಲೈ ನಂತರ ಚಿತ್ರವನ್ನು ಮತ್ತೆ ರೀ-ರಿಲೀಸ್‌ ಮಾಡುವುದಾಗಿ ತಿಳಿಸಿದೆ. ಇದರ ಬೆನ್ನಲ್ಲೇ ಇದೇ ಏ. 16ರಂದು ತೆರೆಕಂಡಿದ್ದ ಮತ್ತೊಂದು ಸಿನಿಮಾ ಅಜೇಯ್‌ ರಾವ್‌ ಅಭಿನಯದ “ಕೃಷ್ಣ ಟಾಕೀಸ್‌’ ಪ್ರದರ್ಶನವನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಚಿತ್ರತಂಡ ನಿರ್ಧರಿಸಿದೆ.

ಇದನ್ನೂ ಓದಿ: ಚಿಕ್ಕಮಗಳೂರು: 9 ವರ್ಷದ ಹಳೇ ಗ್ಲೂಕೋಸ್ ನೀಡಿದ ಮೆಡಿಕಲ್ ಸ್ಟೋರ್; ಕಂಗಾಲಾದ ಗ್ರಾಹಕ !

ಈ ಬಗ್ಗೆ ಮಾತನಾಡಿರುವ “ಕೃಷ್ಣ ಟಾಕೀಸ್‌’ ಚಿತ್ರದ ನಿರ್ದೇಶಕ ವಿಜಯಾನಂದ್‌, “”ಕೃಷ್ಣ ಟಾಕೀಸ್‌’ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದ್ರೆ ಕೊರೋನ ಭಯ ತೀವ್ರವಾಗಿ ಹೆಚ್ಚಾಗುತ್ತಿರುವ ಕಾರಣ, ಜನರ ಆರೋಗ್ಯದ ಹಿತದೃಷ್ಟಿಯಿಂದ ಸದ್ಯದ ಮಟ್ಟಿಗೆ “ಕೃಷ್ಣ ಟಾಕೀಸ್  ಶೋಗಳನ್ನು ಏ. 22ರ ಬಳಿಕ ಸ್ಥಗಿತಗೊಳಿಸಲು ತೀರ್ಮಾನಿಸಿದ್ದೇವೆ. ಸರ್ಕಾರ ಕೂಡ ಥಿಯೇಟರ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಆದೇಶ ನೀಡುವ ಸಾಧ್ಯತೆಯಿದೆ. ಕೊರೋನಾ ಆತಂಕ ಕಡಿಮೆಯಾದ ಬಳಿಕ ಸಿನಿಮಾವನ್ನು ರೀ-ರಿಲೀಸ್‌ ಮಾಡುತ್ತೇವೆ’ ಎಂದಿದ್ದಾರೆ.

ತೆಲುಗಿನತ್ತ ಶೋಕಿವಾಲಾ

ಅಜೇಯ್‌ ರಾವ್‌ ಅಭಿನಯದ “ಶೋಕಿವಾಲಾ’ ಚಿತ್ರ ಕನ್ನಡದ ಜೊತೆ ತೆಲುಗು ಭಾಷೆಯಲ್ಲೂ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ಈ ಹಿಂದೆ ಅಜೇಯ್‌ ರಾವ್‌ ಅಭಿನಯದ “ಕೃಷ್ಣನ್‌ ಮ್ಯಾರೇಜ್‌ ಸ್ಟೋರಿ’ ಚಿತ್ರ ಕೂಡ ತೆಲುಗು ಭಾಷೆಯಲ್ಲಿ ರಿಲೀಸ್‌ ಆಗಿತ್ತು. ಈಗ ಅಜೇಯ್‌ ರಾವ್‌ ಅಭಿನಯದ ಮತ್ತೊಂದು ಚಿತ್ರ ತೆಲುಗಿನಲ್ಲಿ ಬಿಡುಗಡೆಗೆ ತಯಾರಾಗುತ್ತಿದೆ.

ಇನ್ನು “ಶೋಕಿವಾಲ’ ಚಿತ್ರದಲ್ಲಿ ಅಜೇಯ್‌ ರಾವ್‌ ವರಿಗೆ ಸಂಜನಾ ಆನಂದ್‌ ನಾಯಕಿಯಾಗಿ ಜೋಡಿಯಾಗಿದ್ದಾರೆ. “ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌’ ಬ್ಯಾನರ್‌ನಲ್ಲಿ ಟಿ.ಆರ್‌ ಚಂದ್ರಶೇಖರ್‌ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಜಾಕಿ ಈ ಸಿನಿಮಾದ ನಿರ್ದೇಶಕರು.

ಇದನ್ನೂ ಓದಿ: ಉಪೇಂದ್ರ ನೇರ ಮಾತು: ಬಿಝಿನೆಸ್‌ ರಾಜಕಾರಣವೇ ಇವತ್ತಿನ ಸ್ಥಿತಿಗೆ ಕಾರಣ !

ಸಿನೆಮಾ – Udayavani – ಉದಯವಾಣಿ
Read More