ಕಳೆದ ವರ್ಷ ಕೋವಿಡ್‌ ಲಾಕ್‌ಡೌನ್‌ ವೇಳೆ ನಟ ರಿಯಲ್‌ಸ್ಟಾರ್‌ ಉಪೇಂದ್ರ ತಮ್ಮ ಕೃಷಿ ಭೂಮಿಯಲ್ಲಿ ಹೊಸ ತಂತ್ರಜ್ಞಾನವನ್ನು ಬೆಳಸಿಕೊಂಡು, ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದು ನಿಮಗೆ ಗೊತ್ತಿರಬಹುದು. ಈ ವೇಳೆ ಉಪೇಂದ್ರ ಕೃಷಿಯಲ್ಲಿ ಒಂದಷ್ಟು ಪ್ರಯೋಗಗಳನ್ನು ಮಾಡಿ, ಸಾಕಷ್ಟು ಬೆಳೆಗಳನ್ನು ಬೆಳೆಯುವ ಮೂಲಕ ಒಂದಷ್ಟು ಅಭಿಮಾನಿಗಳಿಗೆ ಮಾದರಿಯಾಗಿದ್ದರು.

ಇನ್ನು ಈ ವರ್ಷ ಕೂಡ ಕೊರೋನಾ ಎರಡನೇ ಅಲೆಯ ಆತಂಕ ಜೋರಾಗುತ್ತಿದ್ದು, ಸರ್ಕಾರ ಈಗಾಗಲೇ ವಾರದಲ್ಲಿ ಐದು ದಿನ ನೈಟ್‌ ಕರ್ಫ್ಯೂ ಮತ್ತು ವಾರಾಂತ್ಯದಲ್ಲಿ ಲಾಕ್‌ಡೌನ್‌ ಘೋಷಿಸಿದೆ. ಹೀಗಾಗಿ ಬಹುತೇಕ ಸಿನಿಮಾ ಚಟುವಟಿಕೆಗಳು ಬಂದ್‌ ಆಗಿದ್ದು, ನಟ ಉಪೇಂದ್ರ ಕೂಡ ಸದ್ಯ ತಮ್ಮ ಕೃಷಿ ಭೂಮಿಯತ್ತ ಮುಖ ಮಾಡಿದ್ದಾರೆ.

ಇದನ್ನೂ ಓದಿ:ಸುದೀಪ್‌ ಆರೋಗ್ಯದ ಬಗ್ಗೆ ಜಪಾನ್ ಅಭಿಮಾನಿ ಕಾಳಜಿ

ಕಳೆದ ವರ್ಷದಂತೆ ಈ ವರ್ಷ ಕೂಡ ಉಪೇಂದ್ರ ತಮ್ಮ ಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಕೃಷಿ ಚಟುವಟಿಕೆಗ ಳಲ್ಲಿ ತೊಡಗಿರುವ ಉಪೇಂದ್ರ, “ಕಾಯಕವೇ ಕೈಲಾಸ’ ಎನ್ನುವ ಕ್ಯಾಪ್ಷನ್‌ ಕೊಟ್ಟು, ಕೃಷಿ ಕೆಲಸದ ಫೋಟೋಗಳನ್ನುಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂ ಡಿದ್ದಾರೆ. ಸದ್ಯ ಉಪೇಂದ್ರ ಅವರ ಕೃಷಿ ಕಾರ್ಯಕ್ಕೆ ಅವರ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಂದಹಾಗೆ, ಕಳೆದ ವರ್ಷ ಉಪೇಂದ್ರ ಸಹಜ ಕೃಷಿ ಪದ್ದತಿ ಮೂಲಕ ಹೂವು, ಹಣ್ಣು ಮತ್ತು ತರಕಾರಿಗಳನ್ನು ಬೆಳೆದಿದ್ದರು. ಸೋಶಿಯಲ್‌ ಮೀಡಿಯಾದಲ್ಲಿ ಉಪ್ಪಿ ಅದರ ಬಗ್ಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ: ಶಿವರಾಜ್ ಕುಮಾರ್ ಚಿತ್ರ ದಲ್ಲಿ ಗಾಯಕಿ ಮಂಗ್ಲಿ ನಟನೆ

ಸಿನೆಮಾ – Udayavani – ಉದಯವಾಣಿ
Read More

Leave a comment