ಬೆಂಗಳೂರು: ನಾವು ರಾಜ್ಯದಲ್ಲಿ ಕೈಗೊಂಡ ಕಠಿಣ ಕ್ರಮದಿಂದಾಗಿ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯಡಿಯೂರಪ್ಪ, ಮೇ 10 ರಿಂದ ಕಠಿಣ ಕ್ರಮ ಜಾರಿ ಮಾಡಲಾಗಿದೆ. ಏಪ್ರಿಲ್ 24 ರಿಂದ ಕೆಲವು ನಿರ್ಬಂಧ ಹೇರಲಾಗಿತ್ತು. ಮೇ 10 ರಿಂದ ಕಠಿಣ ಕ್ರಮ ಜಾರಿ ಮಾಡಲಾಗಿದೆ. ಮೇ 5 ರಂದು 50,112 ಕೇಸ್ ದಾಖಲಾಗಿತ್ತು, ಕಠಿಣ ಕ್ರಮದಿಂದ ನಿನ್ನೆ ರಾಜ್ಯದಲ್ಲಿ 39,900 ಕೇಸ್ ದಾಖಲಾಗಿ ಇಳಿಕೆ ಕಂಡಿದೆ. ಇದು ಸಮಾಧಾನ ಸಂಗತಿಯಾಗಿದ್ದು, ಲಾಕ್‍ಡೌನ್ ನಿಂದ ಈ ಪರಿಸ್ಥಿತಿ ಬಂದಿದೆ. ಪರಿಸ್ಥಿತಿ ಸುಧಾರಿಸುತ್ತಿದೆ. ಬೆಂಗಳೂರಿನಲ್ಲಿ 16 ಸಾವಿರಕ್ಕೆ ಇಳಿಕೆ ಆಗಿದೆ. ಪ್ರಾರಂಭದಲ್ಲಿ ಕೇಸ್ ಹೆಚ್ಚಳ ಇದ್ದ ಬೀದರ್, ಕಲಬುರಗಿ, ಬೆಂಗಳೂರಿನಲ್ಲಿ ಕೇಸ್ ಕಡಿಮೆ ಆಗುತ್ತಿದೆ ಎಂದು ಮಾಹಿತಿ ನೀಡಿದರು.

ಕಳೆದ ವರ್ಷ ಮಾರ್ಚ್ ನಲ್ಲಿ 1,970 ಆಕ್ಸಿಜನ್ ಬೆಡ್ 44 ಐಸಿಯು ಬೆಡ್ ಇತ್ತು. ಈಗ ಎಲ್ಲಾ ಸೌಲಭ್ಯ ಹೆಚ್ಚಿಸಲಾಗಿದೆ. ಪ್ರಸ್ತುತ 24 ಸಾವಿರ ಆಕ್ಸಿಜನ್ ಬೆಡ್ ಇವೆ. ಈಗ 24 ಸಾವಿರ ಆಕ್ಸಿಜನ್ ಬೆಡ್, 1,146 ಐಸಿಯು ಬೆಡ್ 2,019 ವೆಂಟಿಲೇಟರ್ ಬೆಡ್ ಸೌಲಭ್ಯ ಇದೆ. ವೈದ್ಯಕೀಯ ಕಾಲೇಜಿನಲ್ಲಿ 4,700 ರಿಂದ 9 ಸಾವಿರಕ್ಕೆ ಬೆಡ್ ಹೆಚ್ಚಳ ಮಾಡಲಾಗಿದೆ. ಆಸ್ಪತ್ರೆಗಳ ಮೂಲಭೂತ ಸೌಕರ್ಯಗಳನ್ನು ಹೆಚ್ಚಳ ಮಾಡುವ ಕೆಲಸ ಆಗುತ್ತಿದೆ. ಖಾಸಗಿ ಆಸ್ಪತ್ರೆಗಳಿಗೆ 200 ವೆಂಟಿಲೇಟರ್ ನೀಡಲಾಗಿದೆ. ಆಕ್ಸಿಜನ್ ಪೂರೈಕೆ ಸರಿ ಮಾಡಲು ಕ್ರಮ ಕೈಗೊಂಡಿದ್ದೇವೆ. 3 ಅಂಶ ಕಾರ್ಯಕ್ರಮ ರೂಪಿಸಲಾಗಿದೆ. ಆಕ್ಸಿಜನ್ ಉತ್ಪಾದನೆ, ಆಕ್ಸಿಜನ್ ಸಿಲಿಂಡರ್, ಕಾನ್ಸಟ್ರೇಟರ್ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಸರ್ಕಾರ 965 ಮೆಟ್ರಿಕ್ ಟನ್ ಆಕ್ಸಿಜನ್ ಪ್ರಮಾಣವನ್ನು 1015 ಎಂಟಿಗೆ ಹೆಚ್ಚಳ ಮಾಡಿದೆ. ವಿಶಾಖಪಟ್ಟಣ, ಒಡಿಸ್ಸಾ ಇನ್ನಿತರ ಕಡೆಯಿಂದ ಆಕ್ಸಿಜನ್ ಪಡೆಯಲಾಗುತ್ತಿದೆ. ಬಹರೇನ್, ಕುವೈತ್, ಜಾರ್ಖಂಡಿನ ಜೇಮ್‍ಶೆಡ್ ಪುರದಿಂದ ಆಕ್ಸಿಜನ್ ತರಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಆಕ್ಸಿಜನ್ ಉತ್ಪಾದನೆ ಹೆಚ್ಚಳಕ್ಕೆ ಕ್ರಮ ಕೈಗೊಂಡಿದ್ದು, 127 ಘಟಕ ಸ್ಥಾಪನೆ ಮಾಡಲಾಗಿದೆ. 62 ಘಟಕ ರಾಜ್ಯ ಹಣದಲ್ಲಿ, 24 ಕೇಂದ್ರ ಹಣದಲ್ಲಿ ಮತ್ತು 11 ವಿವಿಧ ಕಂಪನಿಗಳ ಅನುದಾನದಲ್ಲಿ ಸ್ಥಾಪನೆ ಮಾಡಲಾಗಿದೆ. ಓಲಾ ಮೂಲಕ ಆಕ್ಸಿಜನ್ ಮತ್ತು ಆಕ್ಸಿಜನ್ ಬಸ್‍ಗೆ ಚಾಲನೆ ನೀಡಲಾಗಿದೆ. ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ನೀಗಿಸಲು 10 ಸಾವಿರ ಆಕ್ಸಿಜನ್ ಸಿಲಿಂಡರ್ ಪಡೆಯಲು ನಿರ್ಧಾರ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

ಕೇಂದ್ರ ಸರ್ಕಾರ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುತ್ತಿದೆ. 1.10 ಕೋಟಿ ಡೋಸ್ ನೀಡಿದೆ. 99.5 ಕೋವಿಶೀಲ್ಡ್, 10.9 ಕೋವ್ಯಾಕ್ಸಿನ್ ಲಸಿಕೆ ಕೇಂದ್ರದಿಂದ ರಾಜ್ಯಕ್ಕೆಬಂದಿದೆ. 18 ವರ್ಷ ಮೇಲ್ಪಟ್ಟವರಿಗೆ ರಾಜ್ಯ ಸರ್ಕಾರ 3 ಕೋಟಿ ಡೋಸ್ ಆರ್ಡರ್ ಮಾಡಿದೆ. 2 ಕೋಟಿ ಕೋವಿಶೀಲ್ಡ್, 1 ಕೋಟಿ ಕೋವ್ಯಾಕ್ಸಿನ್ ಲಸಿಕೆ ಬುಕ್ ಮಾಡಲಾಗಿದೆ. 7.5 ಲಕ್ಷ ಕೋವಿಶೀಲ್ಡ್, 1.44 ಲಕ್ಷ ಕೋವ್ಯಾಕ್ಸಿನ್ ಬಂದಿದೆ. ಒಟ್ಟು 8.94 ಡೋಸ್ ಲಭ್ಯವಾಗಿದೆ. ಎರಡನೇ ಡೋಸ್ ನೀಡುವ ಸಲುವಾಗಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನಿಲ್ಲಿಸಲಾಗಿದೆ. ಕೇಂದ್ರ ಸರ್ಕಾರ 3.01 ಲಕ್ಷ ರೆಮ್‍ಡಿಸಿವರ್ ಔಷಧಿಯನ್ನು ಹಂಚಿಕೆ ಮಾಡಿದೆ. ಅದರಲ್ಲಿ 2.77 ಲಕ್ಷ ರೆಮ್‍ಡಿಸಿವರ್ ಪೂರೈಕೆ ಆಗಿದೆ ಎಂದು ವಿವರಿಸಿದರು.

The post ಲಾಕ್‍ಡೌನ್‍ನಿಂದ ಸೋಂಕು ನಿಯಂತ್ರಣ, 3 ಕೋಟಿ ಲಸಿಕೆ ಬುಕ್ – ಸಿಎಂ ಬಿಎಸ್‍ವೈ appeared first on Public TV.

Source: publictv.in

Source link