ಲಾಕ್‍ಡೌನ್ ಜಿಲ್ಲೆಗೆ ಪ್ರವಾಸಿಗರು ಬರುತ್ತಿರುವುದು ಆತಂಕ: ಸುಧಾಕರ್

ಮಡಿಕೇರಿ: ಕೊರೊನಾ ಸೋಂಕು ಹೆಚ್ಚಿರುವ ಕಾರಣ ಜುಲೈ 5ರ ವರೆಗೆ ಮಡಿಕೇರಿಯಲ್ಲಿ ಲಾಕ್‍ಡೌನ್ ಮುಂದುವರಿದಿದೆ. ಜಿಲ್ಲೆಗೆ ಪ್ರವಾಸಿಗರು ಬರುತ್ತಿರುವುದು ಆತಂಕಕಾರಿ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಕೊರೊನಾ ನಿರ್ವಹಣೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅನ್‍ಲಾಕ್ ಅಗಿರುವುದರಿಂದ ಹೊರ ರಾಜ್ಯ ಹೊರ ಜಿಲ್ಲೆಗಳಿಂದ ಪ್ರವಾಸಿಗರು ಕೊಡಗು ಜಿಲ್ಲೆಗೆ ಅಗಮಿಸುತ್ತಿರುವುದು ಆತಂಕವನ್ನುಂಟು ಮಾಡಿದೆ. ಈಗಾಗಲೇ ಜಿಲ್ಲೆ ಲಾಕ್‍ಡೌನ್ ಅಗಿ ಮುಂದುವರಿದಿರುವಾಗ ಪ್ರವಾಸಿಗರು ಜಿಲ್ಲೆಗೆ ಹೇಗೆ ಬರುತ್ತಿದ್ದಾರೆ. ಸಭೆಯಲ್ಲಿ ಭಾಗಿಯಾಗಿದ ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಮಾತಾನಾಡಿ ಮೊದಲಿಂದ ಜಿಲ್ಲಾಡಳಿದ ಗಮನಕ್ಕೆ ತಂದರು ಸರಿಯಾದ ಕ್ರಮ ಜರುಗಿಸುತ್ತಿಲ್ಲ. ಕೇರಳ ಚಕ್ ಪೋಸ್ಟ್ ಮಾಕುಟ್ಟದಲ್ಲಿ ಎಗ್ಗಿಲ್ಲದೆ ಕೇರಳಿಗರು ಕೊಡಗು ಜಿಲ್ಲೆಗೆ ಬರುತ್ತಿದ್ದಾರೆ. ಇತ್ತ ಮೈಸೂರು ಕೊಡಗು ಸಂಪರ್ಕ ಮಾಡುವ ಕುಶಾಲನಗರ ಸಮೀಪ ಕೊಪ್ಪ ಗೇಟ್ ಬಳಿಯು ಬಾರಿ ಸಂಖ್ಯೆಯಲ್ಲಿ ಪ್ರವಾಸಿಗರ ವಾಹಗಳು ಬರುತ್ತಿದೆ. ಪೊಲೀಸರು ನಿರ್ಲಕ್ಷ್ಯ ಮಾಡಿದ್ರೆ ಮತ್ತಷ್ಟು ದಿನ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತದೆ ಪೊಲೀಸ್ ಇಲಾಖೆ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಸುಧಾಕರ್ ಅವರು ಹೋರ ರಾಜ್ಯದಿಂದ ಬರುವವ ತಪಾಸಣೆ ನಡೆಸಿ ಪ್ರವಾಸಿಗರು ಎಂದು ಕಂಡು ಬಂದರೆ ಸೂಕ್ತ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಸೂಚನೆ ನೀಡಿದ್ದಾರೆ ಹೊಸದಾಗಿ ನೇಮಕಗೊಂಡ ವೈದ್ಯರ ಮಾಹಿತಿ ಕೇಳಿದ ಸಂದರ್ಭ ಜಿಲ್ಲಾ ಅರೋಗ್ಯ ಅಧಿಕಾರಿ ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಡಿಎಚ್‍ಓ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ. ನಿಮ್ಮ ಇಲಾಖೆ ವಿಷಯವೇ ನಿಮಗೆ ಸರಿಯಾಗಿ ಗೊತ್ತಿಲ್ಲವೆ ಎಂದು ಇದೇ ಸಂದರ್ಭ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

The post ಲಾಕ್‍ಡೌನ್ ಜಿಲ್ಲೆಗೆ ಪ್ರವಾಸಿಗರು ಬರುತ್ತಿರುವುದು ಆತಂಕ: ಸುಧಾಕರ್ appeared first on Public TV.

Source: publictv.in

Source link