ದಾವಣಗೆರೆ: ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ಜಾರಿ ಮಾಡಿರುವ ಲಾಕ್‍ಡೌನ್‍ನಿಂದ ಸಮಯ ಕಳೆಯಲು ಈಜಲು ತೆರಳಿದ್ದ ಯುವಕರಿಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ಕೆರೆಯಲ್ಲಿ ನಡೆದಿದೆ.

ಕುಂಚವ್ವನಳ್ಳಿ ಗ್ರಾಮದ ಜಗದೀಶ್ ನಾಯಕ (18), ಸಂತೋಷ್ ನಾಯಕ (18) ಸಾವನ್ನಪ್ಪಿದ ಯುವಕರಾಗಿದ್ದು, ಈಜಲು ಬಾರದಿದ್ದರು ಕೆರೆಗೆ ಇಳಿದಿದ್ದೆ ಸಾವಿಗೆ ಕಾರಣ ಎನ್ನಲಾಗಿದೆ. ಘಟನೆ ವೇಳೆ ಯುವಕರೊಂದಿಗೆ ಇದ್ದ ಮತ್ತೊಮ್ಮ ಯುವಕ ಸಾವಿನಿಂದ ಪರಾಗಿದ್ದು, ಸದ್ಯ ಮೃತಪಟ್ಟಿರುವ ಯುವಕರ ಮೃತದೇಹದ ಹುಡುಕುವ ಕಾರ್ಯ ನಡೆದಿದೆ. ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

The post ಲಾಕ್‍ಡೌನ್ ಬೇಜಾರು ಕಳೆಯಲು ಈಜಲು ಹೋಗಿದ್ದ ಇಬ್ಬರು ಯುವಕರು ಸಾವು appeared first on News First Kannada.

Source: newsfirstlive.com

Source link