ಕಾರವಾರ: ಲಾಕ್‍ಡೌನ್ ವೇಳೆ ಅಂಗಡಿ ಕಳ್ಳತನ ನಡೆಸಿದ್ದ ನಾಲ್ವರನ್ನು ಶಿರಸಿ ನಗರ ಪೂಲೀಸರು ಬಂಧಿಸಿದ್ದಾರೆ.

ಶಿರಸಿ ಕರಿಗುಂಡಿಯ ಭರತ ಗಣಪತಿ ನಾಯ್ಕ (20), ಕೋಟೆಗಲ್ಲಿಯ ಪ್ರಕಾಶ ಗುಡ್ಡಪ್ಪ ತಳವಾರ(22) ಮತ್ತು ಅಪ್ರಾಪ್ತ ಬಾಲಕರು ಬಂಧಿತರಾಗಿದ್ದಾರೆ. ಜೂ.6ರಂದು ಶಿರಸಿಯ ಕೃಷ್ಣ ಮೆಡಿಕಲ್ ಸ್ಟೋರ್ ಕಳ್ಳತನ ನಡೆಸಿದ್ದ ಖದೀಮರು, ಲ್ಯಾಪ್‍ಟಾಪ್ ಮತ್ತು 20 ಸಾವಿರ ರೂ. ನಗದು ಕಳ್ಳತನ ಮಾಡಿದ್ದರು. ಅಲ್ಲದೆ ಪಕ್ಕದ ಮಳಿಗೆಗಳಿಗೂ ಕನ್ನ ಹಾಕಿದ್ದು, ಏನೂ ಸಿಗದೇ ಬರಿಗೈಯ್ಯಲ್ಲಿ ಮರಳಿದ್ದರು.

ಬಂಧಿತರನ್ನು ವಿಚಾರಣೆ ನಡೆಸಿದಾಗ ಶಿರಸಿ ಸೇರಿದಂತೆ ಇತರೆಡೆ ಹಲವು ಕಳ್ಳತನ ಪ್ರಕರಣ ನಡೆಸಿರುವುದು ಬೆಳಕಿಗೆ ಬಂದಿವೆ. ಶಿರಸಿ ನಗರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಜನರ ಮೆಚ್ಚುಗೆ ವ್ಯಕ್ತವಾಗಿದೆ.

The post ಲಾಕ್‍ಡೌನ್ ವೇಳೆ ಅಂಗಡಿಗಳಿಗೆ ಕನ್ನ ಹಾಕುತಿದ್ದ ಖದೀಮರ ಬಂಧನ appeared first on Public TV.

Source: publictv.in

Source link