– ವಿವಿಧ ಕೈಗಾರಿಕೆ, ಹಣಕಾಸು ಸಂಸ್ಥೆಗಳ ಹೆಸರಲ್ಲಿ ನಕಲಿ ಐಡಿ

ಬೆಳಗಾವಿ: ಕೊರೊನಾ 2ನೇ ಅಲೆ ತಡೆಗೆ ಸರ್ಕಾರ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಹೀಗಾಗಿ ಕಠಿಣ ಲಾಕ್‍ಡೌನ್ ವಿಧಿಸಿ, ಕೇವಲ ಅಗತ್ಯ ಇರುವವರ ಹಾಗೂ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ. ಇದರ ನಡುವೆ ಇದೀಗ ನಕಲಿ ಐಡಿ ಕಾರ್ಡ್ ದಂಧೆ ಸಹ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಲಾಕ್‍ಡೌನ್ ಜಾರಿಯನ್ನೇ ಬಂಡವಾಳ ಮಾಡಿಕೊಂಡ ಖದೀಮರು, ಫೇಕ್ ಐಡಿ ಕಾರ್ಡ್ ಮಾಡುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಡಿಸಿಪಿ ವಿಕ್ರಂ ಆಮ್ಟೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಕಡೋಲ್ಕರ್ ಗಲ್ಲಿಯ ಮುಚ್ಚಂಡಿ ಪ್ರಿಂಟರ್ಸ್ ಮೇಲೆ ಡಿಸಿಪಿ ದಾಳಿ ಮಾಡಿದ್ದಾರೆ. ಈ ವೇಳೆ ಫೇಕ್ ಐಡಿ ಕಾರ್ಡ್ ಮಾಡುತ್ತಿದ್ದ ಪ್ರಿಂಟಿಂಗ್ ಪ್ರೆಸ್ ಮಾಲೀಕ ವಿಶ್ವನಾಥ್ ಮುಚ್ಚಂಡಿ, ಗ್ರಾಫಿಕ್ ಡಿಸೈನರ್ ರೋಹಿತ್ ಕುಟ್ರೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಕಾರ್ಖಾನೆಗಳು, ಹಣಕಾಸು ಸಂಸ್ಥೆಗಳು, ಕೋ-ಆಪರೇಟಿವ್ ಸೊಸೈಟಿ, ಕ್ಯಾಟರಿಂಗ್ ಹೆಸರಲ್ಲಿ ಆರೋಪಿಗಳು ನಕಲಿ ಐಡಿ ಕಾರ್ಡ್ ಕ್ರಿಯೇಟ್ ಮಾಡುತ್ತಿದ್ದರು. ನಕಲಿ ಐಡಿ ಕಾರ್ಡ್ ತೋರಿಸಿ ಹಲವರು ನಗರದಲ್ಲಿ ಬಿಂದಾಸ್ ಆಗಿ ಓಡಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ, ಡಿಸಿಪಿ ವಿಕ್ರಂ ಆಮ್ಟೆ, ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

The post ಲಾಕ್‍ಡೌನ್ ವೇಳೆ ಸಂಚರಿಸಲು ನಕಲಿ ಐಡಿ ಸೃಷ್ಟಿ- ಇಬ್ಬರು ಅರೆಸ್ಟ್ appeared first on Public TV.

Source: publictv.in

Source link