ಬೆಂಗಳೂರು: ಲಾಠಿ ಬೀಸೋದು, ವಾಹನ ಸೀಜ್ ಮಾಡೋದು ಮುಖ್ಯ ಅಲ್ಲ. ಜನರು ಅರ್ಥ ಮಾಡ್ಕೊಂಡು ಲಾಕ್ಡೌನ್​​ಗೆ ಸಹಕಾರ ನೀಡಬೇಕು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬೊಮ್ಮಾಯಿ.. ಬೆಂಗಳೂರಲ್ಲಿ ಬೆಡ್ ಸಮಸ್ಯೆ ನಿವಾರಣೆ ಕುರಿತು ಸಭೆ ನಡೆಸಲಾಯಿತು. ನಾನು, ಸಚಿವ ಆರ್.ಅಶೋಕ್ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ವಿ. ಬೆಂಗಳೂರು ವಲಯವಾರು ಸಭೆ ನಡೆದಿದೆ, ಬೆಡ್ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ. ಏನೇ ಸಮಸ್ಯೆಗಳಿದ್ದರೂ ಅಧಿಕಾರಿಗಳು ನಮಗೆ ತಿಳಿಸುತ್ತಾರೆ.

ಸಹಾಯವಾಣಿ ಮೂಲಕ ಬರುವ ರೋಗಿಗಳಿಗೆ ಬೆಡ್ ಸಿಗಬೇಕು. ಈ ಮೊದಲು 30 ಬೆಡ್​ಗಳಿಗಿಂತಲೂ ಕಡಿಮೆ ಇರುವ ಆಸ್ಪತ್ರೆಗಳನ್ನ ಪರಿಗಣಿಸಿರಲಿಲ್ಲ. ಈಗ ಅಂತಹ ಆಸ್ಪತ್ರೆಗಳನ್ನು ಬಳಕೆ ಮಾಡಿಕೊಳ್ತೀವಿ. ಇಂತಹ 100 ಆಸ್ಪತ್ರೆಗಳಿವೆ, ಇದರಿಂದ ಹೆಚ್ಚುವರಿಯಾಗಿ 2000 ಸಾವಿರ ಬೆಡ್ ಸಿಗಲಿದೆ. ಈ ಆಸ್ಪತ್ರೆಗಳಲ್ಲಿ ಐಸಿಯು ಕೂಡ ಲಭ್ಯ ಇರುತ್ತದೆ ಎಂದಿದ್ದಾರೆ.

ಕೊರೊನಾ ಟೆಸ್ಟ್ ಕಡಿಮೆ ಮಾಡ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಟೆಸ್ಟ್​ಗಳನ್ನ ಕಡಿಮೆ ಮಾಡುತ್ತಿಲ್ಲ. ಅದಕ್ಕೊಂದು ಪ್ರೊಸಿಜರ್ ಇದೆ, ಅದರ ಪ್ರಕಾರ ಟೆಸ್ಟ್ ಮಾಡಲಾಗುತ್ತಿದೆ. ಲಾಕ್​ಡೌನ್​ನಲ್ಲಿ ಲಾಠಿ ಬೀಸಲು ಅವಕಾಶ ಕೊಡದ ಬಗ್ಗೆ ಮಾತನಾಡಿದ ಸಚಿವರು.. ಲಾಠಿ ಬೀಸೋದು, ವೆಹಿಕಲ್ ಸೀಜ್ ಮಾಡೋದು ಮುಖ್ಯ ಅಲ್ಲ. ಜನರು ಅರ್ಥ ಮಾಡ್ಕೊಂಡು ಲಾಕ್ಡೌನ್ ಗೆ ಸಹಕಾರ ನೀಡಬೇಕು. ಲಾಕ್​ಡೌನ್ ಮುಗಿದ ಬಳಿಕ ಕೊರೊನಾ ಕಂಟ್ರೋಲ್ ಆಗಲಿದೆ ಎಂದರು.

The post ಲಾಠಿ ಬೀಸೋದು, ವಾಹನ ಸೀಜ್ ಮಾಡೋದು ಮುಖ್ಯವಲ್ಲ -ಬೊಮ್ಮಾಯಿ appeared first on News First Kannada.

Source: newsfirstlive.com

Source link