ಬೆಂಗಳೂರು: ಶುಲ್ಕ ನಿಗದಿ ಸಮಿತಿ ರಚನೆಗೆ ಖಾಸಗಿ ಶಾಲೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ಸರ್ಕಾರದ ಈ ನಿರ್ಧಾರವನ್ನ ವಿರೋಧಿಸಿರುವ ಕ್ಯಾಮ್ಸ್ ಕಾರ್ಯದರ್ಶಿ ಶಶಿಧರ್, ಲಾಭವಿಲ್ಲದೇ ಖಾಸಗಿ ಶಾಲೆ ನಡೆಸಲು ಆಗುವುದಿಲ್ಲ. ಖಾಸಗಿ ಶಾಲೆಗಳ ಶುಲ್ಕ ನಿಗಧಿ ಸಾಧ್ಯವಿಲ್ಲ ಎಂದಿದ್ದಾರೆ.

ಈಗಾಗಲೇ ನಾವು ಕೋರ್ಟ್​ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ. ಸಮಿತಿ ರಚನೆಯನ್ನು ಕ್ಯಾಮ್ಸ್​ ವಿರೋಧಿಸುತ್ತದೆ ಎಂದಿದ್ದಾರೆ.

ಸ್ವಾಗತಿಸಿದ ರೂಪ್ಸಾ
ಇನ್ನು ಶುಲ್ಕ ನಿಗದಿ ಸಮಿತಿ ರಚನೆಯ ನಿರ್ಧಾರವನ್ನ ರುಪ್ಸಾ ಸ್ವಾಗತಿಸಿದೆ. ಶುಲ್ಕ ನಿಗಧಿ ಸಮಿತಿ ರಚಿಸುವಂತೆ ಕಳೆದ‌ ವರ್ಷವೇ ಸರ್ಕಾರಕ್ಕೆ ಮನವಿ ಮಾಡಿತ್ತು. ಇದೀಗ ಕೋರ್ಟ್​ಗೆ ಸರ್ಕಾರ ಮನವಿ ಮಾಡಿದೆ. ಇದ್ರಿಂದ ಪೋಷಕರು ಹಾಗೂ ಖಾಸಗಿ ಶಾಲೆಗೂ ಅನುಕೂಲವಾಗುತ್ತದೆ ಅಂತಾ ರುಪ್ಸಾ ಕರ್ನಾಟಕ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.

ಇದನ್ನೂ ಓದಿ: ಫೀಸ್​​ಗಾಗಿ ಖಾಸಗಿ ಶಾಲೆಗಳಿಂದ ಟಾರ್ಚರ್​; ‘ಶುಲ್ಕ ನಿಗದಿ ಸಮಿತಿ’ ರಚನೆಗೆ ಪ್ರಸ್ತಾಪಿಸಿದ ಸರ್ಕಾರ

The post ಲಾಭವಿಲ್ಲದೇ ಖಾಸಗಿ ಶಾಲೆ ನಡೆಸಲು ಆಗಲ್ಲ -ಕ್ಯಾಮ್ಸ್ appeared first on News First Kannada.

Source: newsfirstlive.com

Source link