ಬೆಂಗಳೂರು: ಲಾರಿಯೊಂದರ ಬ್ರೇಕ್​ಫೇಲ್​ ಆದ ಪರಿಣಾಮ  ಪೀಣ್ಯ ಎಸ್​​​ಆರ್​​ಎಸ್​​ ಬಳಿ ಇಂದು ಸರಣಿ ಅಪಘಾತ ಸಂಭವಿಸಿದೆ.

ನೆಲಮಂಗಲ ಕಡೆಯಿಂದ ಬರುತ್ತಿದ್ದ ಲಾರಿಯ ಬ್ರೇಕ್ ಫೇಲ್ ಆಗಿ, ಮುಂಬದಿ ಲಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಆ ಲಾರಿ ಪೊಲೀಸ್ ಬೊಲೆರೋ ಜೀಪ್ ಸೇರಿದಂತೆ ಮತ್ತೆರಡು ಕಾರಿಗೆ ಗುದ್ದಿದೆ. ಇದರಿಂದ ವಾಹನಗಳು ಸಂಪೂರ್ಣ ಜಖಂ ಆಗಿವೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಲಾಕ್​ಡೌನ್ ಹಿನ್ನೆಲೆ ವಾಹನಗಳ ಸಂಚಾರ ಕಡಿಮೆಯಿದ್ದರಿಂದ ಭಾರೀ ಅನಾಹುತ ತಪ್ಪಿದೆ.

ಸದ್ಯ ಪೀಣ್ಯ ಸಂಚಾರಿ ಪೋಲಿಸರು ಸ್ಥಳಕ್ಕೆ ದೌಡಾಯಿಸಿದ್ದು, ಕ್ರೇನ್ ಮೂಲಕ ಅಪಘಾತಕ್ಕೀಡಾದ ವಾಹನಗಳನ್ನ ತೆರವು  ಮಾಡಲಾಗಿದೆ. ಹೈವೇ ರಸ್ತೆ ಬದಲು ಸರ್ವಿಸ್ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಪೊಲೀಸರು ಅನವು ಮಾಡಿಕೊಟ್ಟಿದ್ದಾರೆ.

The post ಲಾರಿಯ ಬ್ರೇಕ್ ಫೇಲ್ ಅಗಿ ಪೀಣ್ಯ SRS ಬಳಿ ಸರಣಿ ಅಪಘಾತ.. ತಪ್ಪಿದ ಭಾರೀ ಅನಾಹುತ appeared first on News First Kannada.

Source: newsfirstlive.com

Source link