ಚಿತ್ರದುರ್ಗ: ಟ್ರ್ಯಾಕ್ಟರ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ನಡೆದಿದೆ.

ಹೆದ್ದಾರಿ ವಿಭಜಕ ಕ್ಲೀನ್ ಮಾಡುವ ಇಬ್ಬರು ಕಾರ್ಮಿಕರು ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ.  ಕ್ಲೀನಿಂಗ್ ಕಾರ್ಯಕ್ಕೆ ಅಂತ ಟ್ರ್ಯಾಕ್ಟರ್​​ನಲ್ಲಿ ಹೋಗುತ್ತಿದ್ದಾಗ ಬೆಂಗಳೂರಿನಿಂದ ಪೂಣೆಗೆ ಹೊರಟ್ಟಿದ್ದ ಲಾರಿ ಬಂದು ಗುದ್ದಿದೆ. ಅಪಘಾತದ ರಭಸಕ್ಕೆ ಟ್ರ್ಯಾಕ್ಟರ್​ ಛಿದ್ರ, ಛಿದ್ರವಾಗಿದೆ. ಅಲ್ಲದೆ ಟ್ರ್ಯಾಕ್ಟರ್​ನ ಇಂಜಿನ್ ಪೀಸ್, ಪೀಸ್ ಆಗಿದ್ದು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

The post ಲಾರಿ-ಟ್ರ್ಯಾಕ್ಟರ್ ಮಧ್ಯೆ ಭೀಕರ ಅಪಘಾತ; ಸ್ಥಳದಲ್ಲೇ ಇಬ್ಬರ ದುರ್ಮರಣ appeared first on News First Kannada.

Source: newsfirstlive.com

Source link