ಅಂತರಾಷ್ಟ್ರೀಯ ಕ್ರಿಕೆಟ್​ನಿಂದ ಇಂಗ್ಲೆಂಡ್‌ ಯುವ ವೇಗಿ ಓಲೀ ರಾಬಿನ್ಸನ್‌ ಅಮಾನತುಗೊಂಡಿದ್ದಾರೆ. 8 ವರ್ಷಗಳ ಹಿಂದೆ ಜನಾಂಗೀಯ ನಿಂದನೆ ಹಾಗೂ ಸೆಕ್ಸಿಯೆಸ್ಟ್​ ಟ್ವೀಟ್​​​ ಮಾಡಿದ್ದ ರಾಬಿನ್ಸನ್​, ಸಂಕಷ್ಟಕ್ಕೆ ಸಿಲುಕಿದ್ದಾರೆ. ಆ ಮೂಲಕ ಎಡ್ಜ್​​​ಬಸ್ಟನ್​ನಲ್ಲಿ ನಡೆಯಲಿರುವ ಪ್ರವಾಸಿ ನ್ಯೂಜಿಲ್ಯಾಂಡ್​ ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯಕ್ಕೆ ರಾಬಿನ್ಸನ್ ಅಲಭ್ಯರಾಗಲಿದ್ದಾರೆ.

ಲಾರ್ಡ್ಸ್​ನಲ್ಲಿ ಚೊಚ್ಚಲ ಟೆಸ್ಟ್​ ಪಂದ್ಯವಾಡಿದ್ದ ರಾಬಿನ್ಸನ್, ಮೊದಲ ಇನ್ನಿಂಗ್ಸ್​ನಲ್ಲಿ ನಾಲ್ಕು ವಿಕೆಟ್​ ಮತ್ತು ಎರಡನೇ ಇನ್ನಿಂಗ್ಸ್​ನಲ್ಲಿ ಮೂರು ವಿಕೆಟ್‌ ಪಡೆದು ಗಮನ ಸೆಳೆದಿದ್ದರು. ಆದ್ರೀಗ, ಇಂಗ್ಲೆಂಡ್​ ಕ್ರಿಕೆಟ್​​ ಬೋರ್ಡ್​​ ಕೆಂಗಣ್ಣಿಗೆ ಗುರಿಯಾಗಿರುವ ವೇಗಿ ರಾಬಿನ್ಸನ್, ಸದ್ಯ ಅಂತರಾಷ್ಟ್ರೀಯ ಕ್ರಿಕೆಟ್​ನಿಂದ ಅಮಾನತಿಗೆ ಒಳಗಾಗಿದ್ದಾರೆ. ಸದ್ಯ ವಿವಾದಿತ ಟ್ವೀಟ್​ ಬಗ್ಗೆ ತನಿಖೆ ಕೈಗೊಂಡಿರುವ ಇಸಿಬಿ, ವರದಿಯ ನಂತರ ಮುಂದಿನ ನಿರ್ಣಯ ಕೈಗೊಳ್ಳಲು ತೀರ್ಮಾನಿಸಿದೆ.

The post ಲಾರ್ಡ್ಸ್​ ಟೆಸ್ಟ್​ ಪಂದ್ಯದಲ್ಲಿ ಮಿಂಚಿದ್ದ ಇಂಗ್ಲೆಂಡ್ ವೇಗಿ ಓಲೀ ರಾಬಿನ್ಸನ್ ಅಮಾನತು appeared first on News First Kannada.

Source: newsfirstlive.com

Source link