ಲಿಪ್​ಸ್ಟಿಕ್​ ಹಚ್ಚಿ ನಿಮ್ಮ ತುಟಿ ಹಾನಿಗೊಳಗಾಗುತ್ತಿದೆಯೇ? ನೀವು ಪ್ರತಿನಿತ್ಯ ಲಿಪ್​ಸ್ಟಿಕ್​ ಬಳಸುವುದಾದರೆ ಈ ಸಲಹೆಗಳನ್ನು ಅನುಸರಿಸಿ | Are you worried lipstick damage your lips follow these tips check in kannada


ಲಿಪ್​ಸ್ಟಿಕ್​ ಹಚ್ಚಿ ನಿಮ್ಮ ತುಟಿ ಹಾನಿಗೊಳಗಾಗುತ್ತಿದೆಯೇ? ನೀವು ಪ್ರತಿನಿತ್ಯ ಲಿಪ್​ಸ್ಟಿಕ್​ ಬಳಸುವುದಾದರೆ ಈ ಸಲಹೆಗಳನ್ನು ಅನುಸರಿಸಿ

ಸಂಗ್ರಹ ಚಿತ್ರ

ಮದುವೆ ಸಮಾರಂಭ, ವಿಶೇಷ ಹಬ್ಬ ಹರಿದಿನಗಳು ಬಂತೆಂದರೆ ಸುಂದರವಾಗಿ ಅಲಂಕಾರಗೊಳ್ಳುವುದು ಮಹಿಳೆಯರ ಕೆಲಸ ಭಾಗದಲ್ಲಿ ಒಂದು ಎಂದರೆ ತಪ್ಪಾಗಲಾರದು. ಇತ್ತೀಚೆಗಂತೂ ಮೇಕಪ್ ಇಲ್ಲದೆ ಮಹಿಳೆಯರು ಹೊರಗಡೆ ಇಳಿಯುವುದೇ ಇಲ್ಲ. ಸಾಮಾನ್ಯವಾಗಿ ಸುಂದರವಾಗಿ ಕಾಣಿಸಲು ಮೇಕಪ್​ ಜೊತೆಯಲ್ಲಿ ಲಿಪ್​ಸ್ಟಿಕ್​ ಕೂಡಾ ಉತ್ತಮ ಆಯ್ಕೆ. ಆದರೆ ಅತಿಯಾದ ಬಳಕೆಯಿಂದ ಮುಖದ ಸೌಂದರ್ಯ ಹೊಳಪು ಕಳೆದುಕೊಳ್ಳಬಹುದು. ಹಾಗಿರುವಾಗ ಲಿಪ್​ಸ್ಟಿಕ್​ ನಿಮ್ಮ ತುಟಿಗಳನ್ನು ಹಾನಿಗೊಳಗಾಗಿಸುತ್ತಿದೆ ಎಂದಾದರೆ ಈ ಕೆಲವು ಸಲಹೆಗಳನ್ನು ಅನುಸರಿಸಿ.

ಚರ್ಮರೋಗ ತಜ್ಞರು ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಲಿಪ್​ಸ್ಟಿಕ್​ಗಳನ್ನು ತೈಲಗಳು ಮತ್ತು ಮೇಣದಿಂದ ತಯಾರಿಸಲಾಗುತ್ತದೆ. ಲಿಪ್​ಸ್ಟಿಕ್​ ವಿವಿಧ ಬಣ್ಣಗಳು ಮತ್ತು ವರ್ಣ ದ್ರವ್ಯ ಗಳಿಂದ ಬರುತ್ತದೆ ಎಂದು ಶಿರ್ಷಿಕೆ ನೀಡುವ ಮೂಲಕ ಪೋಸ್ಟ್ ಹಂಚಿಕೊಂಡಿದ್ದಾರೆ. ನೀವು ಲಿಪ್​ಸ್ಟಿಕ್​ ಹೆಚ್ಚು ಬಳಸಿ ಕಪ್ಪು ತುಟಿಗಳನ್ನು ಹೊಂದಿದ್ದರೆ ಕೆಲವು ಸಲಹೆಗಳು ಈ ಕೆಳಗಿನಂತಿದೆ. ಅವುಗಳನ್ನು ಅನುಸರಿಸುವ ಮೂಲಕ ಸಮಸ್ಯೆಯನ್ನು ನಿಯಂತ್ರಿಸಬಹುದಾಗಿದೆ.

ಆರೋಗ್ಯಕರ ತುಟಿ ಪಡೆಯಲು ಇಲ್ಲಿವೆ ಕೆಲವು ಸಲಹೆಗಳು; 
ನೀವು ಲಿಪ್ಕ್​ಸ್ಟಿಕ್​ ಹಚ್ಚುವ ಮೊದಲು ಲಿಪ್ ಬಾಂಬ್ ಹಚ್ಚಿರಿ
ದಿನಕ್ಕೆ ಎರಡು ಬಾರಿ ರೀಟಚ್ ಮಾಡಬೇಡಿ
ಎಲ್ಲಾ ಸಮಯದಲ್ಲೂ ಲಿಪ್​ಸ್ಟಿಕ್​ಗಳಿಂದ ವಿರಾಮ ತೆಗೆದುಕೊಳ್ಳಿ
ತುಂಬಾ ಹಳೆಯ ಲಿಪ್​ಸ್ಟಿಕ್​ಗಳನ್ನು ಬಳಸಬೇಡಿ

ಆರೋಗ್ಯಕರ ತುಟಿ ಹೊಂದಲು ಈ ಕೆಲವು ತಪ್ಪುಗಳನ್ನು ಮಾಡಬೇಡಿ
ತುಟಿ ನೆಕ್ಕುವುದು
ಧೂಮಪಾನ
ಪದೇ ಪದೇ ಲಿಪ್​ಸ್ಟಿಕ್​ ಅಳವಡಿಸುವುದು

ಇದನ್ನೂ ಓದಿ:

Pimples: ನಿಮ್ಮ ಮುಖದ ಅಂದವನ್ನು ಕಿತ್ತುಕೊಂಡ ಮೊಡವೆ ಸಮಸ್ಯೆಯನ್ನು ಹೋಗಲಾಡಿಸಲು ಕೆಲವು ಟಿಪ್ಸ್​ಗಳು ನಿಮಗಾಗಿ

Beauty Tips: ಕತ್ತೆ ಹಾಲಿನಿಂದ ಮುಖದ ಸೌಂದರ್ಯ ಹೆಚ್ಚಾಗುತ್ತಾ?; ಅಚ್ಚರಿಯ ಸಂಗತಿ ಇಲ್ಲಿದೆ

TV9 Kannada


Leave a Reply

Your email address will not be published. Required fields are marked *