ಲೀಗ್ ಅಂತ್ಯದಲ್ಲಿ ಸಿಎಸ್​ಕೆಗೆ ಹ್ಯಾಟ್ರಿಕ್ ಸೋಲು; ಗೆಲುವಿನೊಂದಿಗೆ ಟೂರ್ನಿಯಿಂದ ಹೊರಬಿದ್ದ ಪಂಜಾಬ್​

ದುಬೈ ಅಂಗಳದಲ್ಲಿ ಮೊದಲು ಬ್ಯಾಟಿಂಗ್​ ಆರಂಭಿಸಿದ ಚೆನ್ನೈ ಸೂಪರ್​ ಕಿಂಗ್ಸ್ 42 ರನ್​ಗಳಿಸುವಷ್ಟರಲ್ಲೇ ಪ್ರಮುಖ 4 ವಿಕೆಟ್​ ಕಳೆದುಕೊಳ್ತು. ಆರಂಭದಲ್ಲೇ ಋತುರಾಜ್​ ಗಾಯಕ್ವಾಡ್​​ ಪೆವಿಲಿಯನ್​ ಸೇರಿದ್ರೆ, ಮೊಯಿನ್​ ಆಲಿ ಡಕೌಟ್​​ ಆಗಿ ನಿರ್ಗಮಿಸಿದ್ರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಾಬಿನ್​ ಉತ್ತಪ್ಪ ಸಿಕ್ಕ ಮತ್ತೊಂದು ಅವಕಾಶವನ್ನ ಕೈಚೆಲ್ಲಿದ್ರು. 2 ರನ್​ಗಳಿಸಿ ಉತ್ತಪ್ಪ ನಿರ್ಗಮಿಸಿದ್ರೆ, ಅಂಬಟಿ ರಾಯುಡು ಆಟ 4 ರನ್​ಗಳಿಗೆ ಅಂತ್ಯವಾಯ್ತು.

2 ಬಿರುಸಿನ ಬೌಂಡರಿ ಬಾರಿಸಿ ಅಬ್ಬರಿಸೋ ಸೂಚನೆ ನೀಡಿದ ಧೋನಿ ಆಟವೂ ಹೆಚ್ಚು ಹೊತ್ತು ನಡೆಯಲಿಲ್ಲ. ಒಂದೆಡೆ ವಿಕೆಟ್​​ ಪತನವಾಗ್ತಿದ್ರೆ, ಇನ್ನೊಂದು ತುದಿಯಲ್ಲಿ ಜವಾಬ್ದಾರಿಯುತ ಇನ್ನಿಂಗ್ಸ್​ ಕಟ್ಟಿದ ಫಾಪ್​ ಡು ಪ್ಲೆಸಿಸ್​​ ಅರ್ಧಶತಕ ಸಿಡಿಸಿದ್ರು. 55 ಎಸೆತಗಳನ್ನ ಎದುರಿಸಿ 8 ಬೌಂಡರಿ, 2 ಸಿಕ್ಸರ್​ ಸಿಡಿಸಿದ ಫಾಪ್​ ತಂಡದ ಮೊತ್ತ ಹೆಚ್ಚಿಸಲು ನೆರವಾದ್ರು. ಅಂತಿಮವಾಗಿ 20 ಓವರ್​​ಗಳಲ್ಲಿ ಸಿಎಸ್​ಕೆ 6 ವಿಕೆಟ್​ ವಿಕೆಟ್​ ಕಳೆದುಕೊಂಡು 134 ರನ್​ಗಳಿಸಿತು.

ಈ ಸಾಧಾರಣ ಟಾರ್ಗೆಟ್​ ಬೆನ್ನತ್ತಿದ ಪಂಜಾಬ್​ ಕಿಂಗ್ಸ್​ ಉತ್ತಮ ಆರಂಭ ಪಡೆದರೂ, ಓಪನರ್​​ ಮಯಾಂಕ್​ ಅಗರ್​ವಾಲ್,​ ಅಲ್ಪ ಮೊತ್ತಕ್ಕೆ ಔಟ್​ ಆಗಿ ನಿರಾಸೆ ಮೂಡಿಸಿದ್ರು. ಬಳಿಕ ಕಣಕ್ಕಿಳಿದ ಸರ್ಫರಾಜ್​ ಖಾನ್​ ಶೂನ್ಯಕ್ಕೆ ಔಟಾದ್ರೆ, ಶಾರೂಖ್​ ಖಾನ್​ 8, ಏಡೆನ್​ ಮಾರ್ಕರಮ್​ 13 ರನ್​ಗಳಿಸುವಷ್ಟರಲ್ಲೇ ಸುಸ್ತಾದ್ರು.

ಆದ್ರೆ, ನಾಯಕನ ಆಟವಾಡಿದ ಕೆಎಲ್​ ರಾಹುಲ್​ ಪಂಜಾಬ್​ ಪಡೆಗೆ ಗೆಲುವಿನ ಗಿಫ್ಟ್​​ ನೀಡಿದ್ರು. 42 ಎಸೆತಗಳಲ್ಲೇ 7 ಬೌಂಡರಿ, 8 ಸಿಕ್ಸರ್​ ಸಿಡಿಸಿ ಅಬ್ಬರಿಸಿದ ರಾಹುಲ್​ 98 ರನ್​ ಗಳಿಸಿದ್ರು. ಅಂತಿಮವಾಗಿ 13 ಓವರ್​​ಗಳಲ್ಲೇ 4 ವಿಕೆಟ್​​ ಕಳೆದುಕೊಂಡು ಗುರಿ ಮುಟ್ಟಿದ ಪಂಜಾಬ್​ ರನ್​ರೇಟ್​ ಹೆಚ್ಚಿಸಿಕೊಂಡರೆ, ಚೆನ್ನೈ ಸೂಪರ್​ ಕಿಂಗ್ಸ್​ ಹ್ಯಾಟ್ರಿಕ್​ ಸೋಲಿಗೆ ಶರಣಾಯ್ತು.

The post ಲೀಗ್ ಅಂತ್ಯದಲ್ಲಿ ಸಿಎಸ್​ಕೆಗೆ ಹ್ಯಾಟ್ರಿಕ್ ಸೋಲು; ಗೆಲುವಿನೊಂದಿಗೆ ಟೂರ್ನಿಯಿಂದ ಹೊರಬಿದ್ದ ಪಂಜಾಬ್​ appeared first on News First Kannada.

News First Live Kannada

Leave a comment

Your email address will not be published. Required fields are marked *