ಲೀಸೆಸ್ಟರ್‌ನಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯ ನಡುವೆ ಗಲಭೆ; ಇಬ್ಬರ ಬಂಧನ | Large scale disorder broke out in Leicester on Saturday mainly from Muslim and Hindu communities two arrests


ಲೀಸೆಸ್ಟರ್‌ನಾದ್ಯಂತ ಹಿಂದೂ ಮತ್ತು ಜೈನ ದೇವಾಲಯಗಳನ್ನು ಪ್ರತಿನಿಧಿಸುವ ಸಂಜೀವ್ ಪಟೇಲ್, ಶನಿವಾರ ರಾತ್ರಿ ಸಂಭವಿಸಿದ ಘಟನೆ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.  ನಾವು ನಗರದಲ್ಲಿ ಹಲವು ದಶಕಗಳಿಂದ ಸಾಮರಸ್ಯದಿಂದ ಬದುಕಿದ್ದೇವೆ.

ಶನಿವಾರ ಯುನೈಟೆಡ್ ಕಿಂಗ್ಡಂನ ಲೀಸೆಸ್ಟರ್‌ನಲ್ಲಿ (Leicester )ಮುಸ್ಲಿಂ ಮತ್ತು ಹಿಂದೂ ಸಮುದಾಯಗಳ ನಡುವೆ ಗಲಭೆಯುಂಟಾಗಿದ್ದು ಪೊಲೀಸರು ಮತ್ತು ಸಮುದಾಯದ ಮುಖಂಡರು ಶಾಂತವಾಗಿರಲು ಜನತೆಗೆ ಕರೆ ನೀಡಿದ್ದಾರೆ. ಎರಡೂ ಸಮುದಾಯದ ಗುಂಪುಗಳ ನಡುವಿನ ಘರ್ಷಣೆ ತಪ್ಪಿಸಲು ಪೊಲೀಸರು ಪ್ರಯತ್ನಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಏಕಾಏಕಿ ಪ್ರತಿಭಟನೆ ನಡೆದಿದ್ದು ಉದ್ವಿಗ್ನ ಪರಿಸ್ಥಿತಿಯುಂಟಾಗಿದೆ ಎಂದು ಪೊಲೀಸರು ಹೇಳಿದರು. ಆಗಸ್ಟ್ 28 ರಂದು ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯದ ನಂತರ ಹಿಂಸಾಚಾರ ಸೇರಿದಂತೆ ಹಲವಾರು ಘಟನೆಗಳು ಇತ್ತೀಚೆಗೆ ವರದಿ ಆಗಿತ್ತು. ನಾವು ಬೀದಿಗಳಲ್ಲಿ ನೋಡಿರುವುದು ತುಂಬಾ ಆತಂಕಕಾರಿಯಾಗಿದೆ. ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯದ ಹೊತ್ತಲ್ಲಿ ಸಮುದಾಯಗಳ ನಡುವೆ ವಾಗ್ವಾದ ಆಗುತ್ತದೆ. ಈ ಪಂದ್ಯಗಳಿಗೆ ಜನ ಸೇರುತ್ತಾರೆ, ಆದರೆ ಈವರೆಗೆ ಈ ರೀತಿ ಇಷ್ಟು ಕೆಟ್ಟದಾಗಿ ಏನೂ ಆಗಿರಲಿಲ್ಲ ಎಂದು ಲೀಸೆಸ್ಟರ್ ಮೂಲದ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಸುಲೇಮಾನ್ ನಗ್ಡಿ ಹೇಳಿರುವುದಾಗಿ ಬಿಬಿಸಿ ವರದಿ ಮಾಡಿಜೆ “ನಮಗೆ ಶಾಂತಿ ಬೇಕು. ಈ ಉದ್ವಿಗ್ನತೆ ನಿಲ್ಲಬೇಕು. ಕೆಲವು ಅತೃಪ್ತ ಯುವಕರು ವಿನಾಶವನ್ನು ಉಂಟುಮಾಡುತ್ತಿದ್ದಾರೆ. ಇದು ಕೊನೆಗೊಳ್ಳಬೇಕು ಎಂಬ ಸಂದೇಶವನ್ನು ನಾವು ನೀಡಬೇಕು ಪೋಷಕರು ವರ ಹಿರಿಯರು ಯುವ ಜನಾಂಗದೊಂದಿಗೆ ಮಾತನಾಡುವ ಮೂಲಕ ಇದನ್ನು ಮಾಡಲು ಪ್ರಯತ್ನಿಸಬೇಕು ಎಂದಿದ್ದಾರೆ.

ಲೀಸೆಸ್ಟರ್‌ನಾದ್ಯಂತ ಹಿಂದೂ ಮತ್ತು ಜೈನ ದೇವಾಲಯಗಳನ್ನು ಪ್ರತಿನಿಧಿಸುವ ಸಂಜೀವ್ ಪಟೇಲ್, ಶನಿವಾರ ರಾತ್ರಿ ಸಂಭವಿಸಿದ ಘಟನೆ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.  ನಾವು ನಗರದಲ್ಲಿ ಹಲವು ದಶಕಗಳಿಂದ ಸಾಮರಸ್ಯದಿಂದ ಬದುಕಿದ್ದೇವೆ. ಆದರೆ ಕಳೆದ ಕೆಲವು ವಾರಗಳಲ್ಲಿ ಜನರುಯಾವುದರ ಬಗ್ಗೆ ಅತೃಪ್ತಿ ಹೊಂದಿದ್ದಾರೆ ಎಂಬುದರ ಬಗ್ಗೆ ನಾವು ಚರ್ಚಿಸಬೇಕಿದೆ ಎಂದಿದ್ದಾರೆ.

ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಹಿಂಸೆ ಮಾರ್ಗವಲ್ಲ.”ನಾವು ಗಾಬರಿಗೊಂಡಿದ್ದೇವೆ ಮತ್ತು (ನಿನ್ನೆ) ಮತ್ತು ಕಳೆದ ಎರಡು ವಾರಗಳಲ್ಲಿ ಏನು ನಡೆದಿದೆಯೋ ಇದಕ್ಕೆ ವಿಷಾದಿಸುತ್ತೇವೆ. ಹಿಂದೂ ಮತ್ತು ಜೈನ ಸಮುದಾಯದಾದ್ಯಂತ ಮತ್ತು ನಮ್ಮ ಮುಸ್ಲಿಂ ಸಹೋದರರು ಮತ್ತು ಸಹೋದರಿಯರಲ್ಲಿ ನಾಯಕರು ಶಾಂತರಾಗಿರಿ ಎಂದು ಹೇಳುತ್ತಲೇ ಇದ್ದಾರೆ. ಅದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ ಪಟೇಲ್.

ಹಿಂಸೆ ಯಾವುದಕ್ಕೂ ಪರಿಹಾರವಲ್ಲ, ಶಾಂತಿ ಕಾಪಾಡಬೇಕು ಎಂದಿದ್ದಾರೆ ಅವರು. ಪ್ರಸ್ತುತ ಪ್ರಕರಣದಲ್ಲಿ
ಒಬ್ಬ ವ್ಯಕ್ತಿಯನ್ನು ಹಿಂಸಾತ್ಮಕ ಕೃತ್ಯಕ್ಕೆ ಸಂಚು ರೂಪಿಸಿದ ಶಂಕೆಯ ಮೇಲೆ ಮತ್ತು ಇನ್ನೊಬ್ಬ ಆಯುಧ ಹೊಂದಿದ್ದ ಎಂಬ ಕಾರಣದಿಂದ ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.