ಬೆಂಗಳೂರು: ಸ್ಯಾಂಡಲ್‍ವುಡ್ ನಟ ಲೂಸ್ ಮಾದ ಯೋಗಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರವಾಗಿದೆ.

ಹೌದು, ಯೋಗಿ ಇಂದು 31ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಣನಕುಂಟೆಯ ತಮ್ಮ ನಿವಾಸದಲ್ಲಿ ಸೆಲೆಬ್ರೇಟ್ ಮಾಡಲಾಗಿದೆ. ಸಿಂಪಲ್ ಆಗಿ ಕೇಕ್ ಕಟ್ ಮಾಡಿ ಯೋಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಇತ್ತ ಚಿತ್ರತಂಡ ಲಂಕೆ ಚಿತ್ರದ ಮೋಶನ್ ಪೋಸ್ಟರ್ ಅನ್ನು ಉಡುಗೊರೆಯಾಗಿ ನೀಡಿದೆ. ಸದ್ಯ ಯೋಗಿ ನಾಯಕನಾಗಿ ನಟಿಸಿರುವ ಲಂಕೆ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಯೋಗಿ ಬರ್ತ್‍ಡೇ ಪ್ರಯುಕ್ತ ಇಂದು ಬೆಳಗ್ಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‍ನಲ್ಲಿ ಲಂಕೆ ಮೋಶನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಲಂಕೆ ಚಿತ್ರದಲ್ಲಿ ನಾಯಕ ಯೋಗಿ ಜೊತೆಗೆ ಕೃಷಿ ತಾಪಂಡ, ಕಾವ್ಯ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ಇತ್ತೀಚೆಗೆ ನಿಧನರಾದ ನಟ ಸಂಚಾರಿ ವಿಜಯ್ ಕೂಡ ಚಿತ್ರದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ: ಹೊಸ ಗೆಳೆಯನನ್ನು ಅದ್ಧೂರಿಯಾಗಿ ಮನೆಗೆ ಸ್ವಾಗತಿಸಿದ ‘ಉರಿ’ ನಟ..!

ಚಿತ್ರವನ್ನು ರಾಮ್ ಪ್ರಸಾದ್ ಎಂ.ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಸಾಹಸ ಪ್ರಧಾನ ಕಥಾಹಂದರ ಹೊಂದಿರುವ ಚಿತ್ರವು “ದಿ ಗ್ರೇಟ್ ಎಂಟರ್‍ಟೈನರ್” ಬ್ಯಾನರ್‍ನಲ್ಲಿ ಪಟೇಲ್ ಶ್ರೀನಿವಾಸ್ (ನಾಗವಾರ) ಹಾಗೂ ಸುರೇಖ ರಾಮಪ್ರಸಾದ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಾರ್ತಿಕ್ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ. ರಮೇಶ್ ಬಾಬು ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನವಿದೆ. ಇದನ್ನೂ ಓದಿ: ಮರೆಯಲಾಗದ ಎರಡು ಸಿನಿಮಾಗಳು ಒಂದೇ ದಿನ: ಸುದೀಪ್

The post ಲೂಸ್ ಮಾದನಿಗೆ ಹುಟ್ಟುಹಬ್ಬದ ಸಂಭ್ರಮ- ಗಿಫ್ಟ್ ಆಗಿ ಲಂಕೆ ಟೀಸರ್ ರಿಲೀಸ್ appeared first on Public TV.

Source: publictv.in

Source link