ಲೈಂಗಿಕ ಕಾರ್ಯಕರ್ತರಿಗೂ ಆಧಾರ್ ಕಾರ್ಡ್ ನೀಡಲು ಸುಪ್ರೀಂ ಕೋರ್ಟ್​ ಆದೇಶ | Right To Dignity Supreme Court Directs Issuance Of Aadhaar Cards To Sex Workers


ಲೈಂಗಿಕ ಕಾರ್ಯಕರ್ತರಿಗೂ ಆಧಾರ್ ಕಾರ್ಡ್ ನೀಡಲು ಸುಪ್ರೀಂ ಕೋರ್ಟ್​ ಆದೇಶ

ಸಾಂದರ್ಭಿಕ ಚಿತ್ರ

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡಿದ ಪ್ರೊಫಾರ್ಮಾ ಪ್ರಮಾಣಪತ್ರದ ಆಧಾರದ ಮೇಲೆ ಲೈಂಗಿಕ ಕಾರ್ಯಕರ್ತರಿಗೆ ಆಧಾರ್ ಕಾರ್ಡ್‌ಗಳನ್ನು ನೀಡಲಾಗುತ್ತದೆ.

ನವದೆಹಲಿ: ಲೈಂಗಿಕ ಕಾರ್ಯಕರ್ತರಿಗೆ ಕೂಡ ಆಧಾರ್ ಕಾರ್ಡ್‌ಗಳನ್ನು ನೀಡುವಂತೆ ಸುಪ್ರೀಂ ಕೋರ್ಟ್ (Supreme Court) ಗುರುವಾರ ನಿರ್ದೇಶನ ನೀಡಿದೆ. ಪ್ರತಿಯೊಬ್ಬ ವ್ಯಕ್ತಿಯನ್ನು ಘನತೆಯಿಂದ ನಡೆಸಿಕೊಳ್ಳುವುದು ಮೂಲಭೂತ ಹಕ್ಕಾಗಿದೆ ಎಂದು ಸುಪ್ರೀಂಕೋರ್ಟ್​ ಹೇಳಿದೆ. ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ನೇತೃತ್ವದ ಪೀಠವು ಲೈಂಗಿಕ ಕಾರ್ಯಕರ್ತೆಯರ ಗೌಪ್ಯತೆಯನ್ನು ಉಲ್ಲಂಘಿಸಬಾರದು ಮತ್ತು ಅವರ ಗುರುತನ್ನು ಬಹಿರಂಗಪಡಿಸಬಾರದು ಎಂದು ಹೇಳಿದೆ.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡಿದ ಪ್ರೊಫಾರ್ಮಾ ಪ್ರಮಾಣಪತ್ರದ ಆಧಾರದ ಮೇಲೆ ಲೈಂಗಿಕ ಕಾರ್ಯಕರ್ತರಿಗೆ ಆಧಾರ್ ಕಾರ್ಡ್‌ಗಳನ್ನು ನೀಡಲಾಗುತ್ತದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (NACO)ಯಲ್ಲಿ ಗೆಜೆಟೆಡ್ ಅಧಿಕಾರಿ ಅಥವಾ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ ಯೋಜನಾ ನಿರ್ದೇಶಕರು ಸಲ್ಲಿಸುತ್ತಾರೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ನ್ಯಾಕೊ) ಅಥವಾ ರಾಜ್ಯ ಏಡ್ಸ್ ನಿಯಂತ್ರಣ ಸಂಘದ ಯೋಜನೆ ನಿರ್ದೇಶಕರು ಸಲ್ಲಿಸಿದ ಆಧಾರದಲ್ಲಿ ಲೈಂಗಿಕ ಕಾರ್ಯಕರ್ತರಿಗೆ ಆಧಾರ್ ನೀಡಬಹುದು. ವ್ಯಕ್ತಿ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗಿರಲಿ ಆ ವ್ಯಕ್ತಿಗೆ ಗೌರವ ನೀಡಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ಎ.ಎಸ್. ಬೋಪಣ್ಣ ಅವರಿದ್ದ ಪೀಠ ತಿಳಿಸಿದೆ.

NACO ಗೆಜೆಟೆಡ್ ಅಧಿಕಾರಿ ಅಥವಾ ಆಯಾ ರಾಜ್ಯ ಸರ್ಕಾರಗಳ ಆರೋಗ್ಯ ಇಲಾಖೆಯ ಗೆಜೆಟೆಡ್ ಅಧಿಕಾರಿ ನೀಡಿದ ಪ್ರಮಾಣಪತ್ರವನ್ನು ಸಲ್ಲಿಸಿದರೆ ಗುರುತಿನ ಪುರಾವೆಯನ್ನು ಒತ್ತಾಯಿಸದೆಯೇ ಲೈಂಗಿಕ ಕಾರ್ಯಕರ್ತರಿಗೆ ಆಧಾರ್ ಕಾರ್ಡ್ ನೀಡಬಹುದು ಎಂದು UIDAI ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ಸೂಚಿಸಿತ್ತು. ಯಾವುದೇ ಗುರುತಿನ ಪುರಾವೆ ಹೊಂದಿರದ ಮತ್ತು ಪಡಿತರ ವಿತರಣೆಯಿಂದ ವಂಚಿತರಾಗಿರುವ ಲೈಂಗಿಕ ಕಾರ್ಯಕರ್ತೆಯರನ್ನು ಗುರುತಿಸುವ ಪ್ರಕ್ರಿಯೆಯನ್ನು ಮುಂದುವರಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

TV9 Kannada


Leave a Reply

Your email address will not be published. Required fields are marked *