2017ರಲ್ಲಿ ತಂಡದ ಸಹ ಸಿಬ್ಬಂದಿ ಮಹಿಳೆಯೊಬ್ಬರಿಗೆ ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ಮಾಜಿ ನಾಯಕ ಟಿಮ್ ಪೇನ್ ಸಂದೇಶವೊಂದು ಕಳುಹಿಸಿದ್ದರು. ಇದು ಲೈಂಗಿಕ ಭಾವನೆ ಕೆರಳಿಸುವ ಸಂದೇಶವಾದ ಕಾರಣ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಪೇನ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಮೂರು ವರ್ಷಗಳು ಕಳೆದರೂ ಮತ್ತೊಮ್ಮೆ ಈ ಕೇಸ್ ಮುನ್ನಲೆಗೆ ಬಂದಿದೆ.
ನನ್ನ ಪತಿಯನ್ನು ತಾವು ಕ್ಷಮಿಸಿದ್ದರೂ ಸಮಾಜ ಇನ್ನೂ ಆ ವಿಷಯವನ್ನು ವಿಸ್ತರಿಸುತ್ತ ಸಾಗಿರುವುದು ಬೇಸರ ತಂದಿದೆ ಎಂದಿದ್ದಾರೆ ಪೇನ್ ಪತ್ನಿ ಬೋನಿ ಮ್ಯಾಗ್ಸ್. ಲೈಂಗಿಕ ಸಂದೇಶ ಮತ್ತು ಅನಂತರ ಉಂಟಾದ ವಿವಾದವನ್ನು ಕುಟುಂಬದ ವ್ಯಾಪ್ತಿಯಲ್ಲಿ ಮರೆತಿದ್ದೇವೆ. ಜೀವನ ಸುಗಮವಾಗಿ ಮುಂದೆ ಸಾಗುತ್ತಿದೆ. ಆದರೆ ಸಮಾಜ ಇನ್ನೂ ಅದೇ ವಿಷಯದ ಸುತ್ತ ಗಿರಕಿ ಹೊಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದು ಅತ್ಯಂತ ವಿಷಾದಕರ ಸಂಗತಿ. ಆರಂಭದಲ್ಲಿ ನನಗೆ ನೋವಾಗಿತ್ತು. ಪತಿ ಮೇಲೆ ನನ್ನ ಸಿಟ್ಟು ತೋರಿಸಿದ್ದೆ. ಜಗಳವೂ ಆಗಿತ್ತು. ನಂತರ ಇಬ್ಬರೂ ಕುಳಿತು ಮಾತನಾಡಿದೆವು. ಜೊತೆಯಾಗಿ ಸಾಗಲು ನಿರ್ಧರಿಸಿದ ನಂತರ ನಿರಾಳವಾಗಿದ್ದೇನೆ. ಈಗ ಮತ್ತೆ ಮನಸ್ಸು ಈ ವಿಚಾರವಾಗಿ ತಲ್ಲಣಗೊಂಡಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಮ್ಯಾಚ್ ವೇಳೆ ಅನಗತ್ಯ ವರ್ತನೆ; ಪಾಕ್ ಆಟಗಾರ ಅಫ್ರಿದಿಗೆ ಐಸಿಸಿ ವಿಧಿಸಿದ ದಂಡ ಎಷ್ಟು ಗೊತ್ತಾ