‘ಲೈಗರ್​’ ಟಿಕೆಟ್ ಬುಕಿಂಗ್ ಓಪನ್​; ರಿಲೀಸ್​ಗೂ ಮೊದಲೇ ಹವಾ ಎಬ್ಬಿಸಿದ ವಿಜಯ್ ದೇವರಕೊಂಡ ಚಿತ್ರ | Vijay Devarakonda Liger Movie Pre Booking Open And getting good response


ವಿಜಯ್ ದೇವರಕೊಂಡ ಅವರು ತಮ್ಮ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಮಾಸ್ ಅವತಾರ ತಾಳಿದ್ದಾರೆ. ಬಾಕ್ಸರ್ ಪಾತ್ರದಲ್ಲಿ ಅವರು ನಟಿಸಿದ್ದಾರೆ.

ವಿಜಯ್ ದೇವರಕೊಂಡ (Vijay Devarakonda) ನಟನೆಯ ‘ಲೈಗರ್’ ಸಿನಿಮಾ ಆಗಸ್ಟ್ 25ರಂದು ತೆರೆಗೆ ಬರೋಕೆ ರೆಡಿ ಇದೆ. ಈ ಸಿನಿಮಾ ಬಗ್ಗೆ ವಿಜಯ್ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ವಿಜಯ್ ದೇವರಕೊಂಡ ಅವರು ರಗಡ್ ಅವತಾರ ತಾಳಿದ್ದಾರೆ. ಈ ಕಾರಣದಿಂದಲೂ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈಗ ಚಿತ್ರ ರಿಲೀಸ್​ಗೂ ನಾಲ್ಕು ದಿನ ಮೊದಲು ಪ್ರೀ-ಬುಕಿಂಗ್ ಬಿಡಲಾಗಿದೆ. ಹೈದರಾಬಾದ್, ಬೆಂಗಳೂರು, ಮುಂಬೈ ಮೊದಲಾದ ಕಡೆಗಳಲ್ಲಿ ಪ್ರೀ-ಬುಕಿಂಗ್​ಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪೂರಿ ಜಗನ್ನಾಥ್ ಅವರು ‘ಲೈಗರ್’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹೀಗಾಗಿ ಸಿನಿಮಾ ಮೈಲೇಜ್ ಪಡೆದುಕೊಂಡಿದೆ. ವಿಜಯ್ ದೇವರಕೊಂಡ ಅವರು ತಮ್ಮ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಮಾಸ್ ಅವತಾರ ತಾಳಿದ್ದಾರೆ. ಬಾಕ್ಸರ್ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಟ್ರೇಲರ್ ಹಾಗೂ ಹಾಡುಗಳು ಚಿತ್ರದ ಮೈಲೇಜ್ ಹೆಚ್ಚಿಸಿದೆ. ಪ್ರೀ-ಬುಕಿಂಗ್​ನಲ್ಲೂ ಸಿನಿಮಾ ಧೂಳೆಬ್ಬಿಸುತ್ತಿದೆ.

ಸೋಮವಾರ (ಆಗಸ್ಟ್ 22) ಪ್ರೀ-ಬುಕಿಂಗ್ ಓಪನ್ ಮಾಡಲಾಗಿದೆ. ಬೆಂಗಳೂರು, ಹೈದರಾಬಾದ್, ಮುಂಬೈ ಮೊದಲಾದ ನಗರಗಳಲ್ಲಿ ಪ್ರೀ ಬುಕಿಂಗ್ ಓಪನ್ ಮಾಡಲಾಗಿದೆ. ಹೈದರಾಬಾದ್​ನಲ್ಲಿ ಈಗಾಗಲೇ 500ಕ್ಕೂ ಅಧಿಕ ಶೋಗಳನ್ನು ಬಿಡಲಾಗಿದೆ. ಹಲವು ಶೋಗಳು ಈಗಾಗಲೇ ಸೋಲ್ಡ್​ಔಟ್ ಆಗಿದೆ. ಕರ್ನಾಟಕದಲ್ಲೂ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಗುರುವಾರದ (ಆಗಸ್ಟ್ 25) ವೇಳೆಗೆ ಮತ್ತಷ್ಟು ಶೋ ಹೆಚ್ಚಿಸುವ ಸಾಧ್ಯತೆ ಇದೆ.

ಹೈದರಾಬಾದ್

TV9 Kannada


Leave a Reply

Your email address will not be published.