‘ಲೈಗರ್’ ಯಶಸ್ಸಿಗೆ ವಿಶೇಷ ಪೂಜೆ; ವಿಜಯ್​​ ದೇವರಕೊಂಡ ನಿವಾಸದಲ್ಲಿ ಅನನ್ಯಾ ಪಾಂಡೆ | Vijay Devarakonda mother Special Pooja For Liger Movie Success


ವಿಜಯ್ ದೇವರಕೊಂಡ ಅವರ ತಾಯಿ ‘ಲೈಗರ್’ ಚಿತ್ರ ಗೆಲ್ಲಲಿ ಎಂದು ಹೈದರಾಬಾದ್​​ ನಿವಾಸದಲ್ಲಿ ಪೂಜೆ ಮಾಡಿಸಿದ್ದಾರೆ. ವಿಜಯ್ ಹಾಗೂ ಅನನ್ಯಾ ಆಶೀರ್ವಾದ ಪಡೆದಿದ್ದಾರೆ.

‘ಲೈಗರ್’ ಯಶಸ್ಸಿಗೆ ವಿಶೇಷ ಪೂಜೆ; ವಿಜಯ್​​ ದೇವರಕೊಂಡ ನಿವಾಸದಲ್ಲಿ ಅನನ್ಯಾ ಪಾಂಡೆ

ವಿಜಯ್-ಅನನ್ಯಾ

ವಿಜಯ್ ದೇವರಕೊಂಡ (Vijay Devarakonda) ನಟನೆಯ ‘ಲೈಗರ್’ ಸಿನಿಮಾ ತೆರೆಗೆ ಬರಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಈ ಮಧ್ಯೆ ಚಿತ್ರತಂಡ ಜೋರಾಗಿ ಪ್ರಚಾರ ಕಾರ್ಯ ಮಾಡುತ್ತಿದೆ. ದೇಶದ ಪ್ರಮುಖ ನಗರಗಳಿಗೆ ತೆರಳಿ ಸಿನಿಮಾಗೆ ಪ್ರಮೋಷನ್ ನೀಡಲಾಗುತ್ತಿದೆ. ವಿಜಯ್ ದೇವರಕೊಂಡ ತೆರಳಿದಲ್ಲೆಲ್ಲ ಅವರನ್ನು ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದಾರೆ. ಈಗ ‘ಲೈಗರ್’ ತಂಡದ ಗೆಲುವಿಗೆ ವಿಜಯ್ ದೇವರಕೊಂಡ ಅವರ ತಾಯಿ ವಿಶೇಷ ಪೂಜೆ ಮಾಡಿಸಿದ್ದಾರೆ. ವಿಜಯ್ ಹಾಗೂ ಅನನ್ಯಾ ಈ ಪೂಜೆಯಲ್ಲಿ ಭಾಗಿ ಆಗಿ, ಆಶೀರ್ವಾದ ಪಡೆದಿದ್ದಾರೆ.

ಆಗಸ್ಟ್ 25ರಂದು ತೆರೆಗೆ ಬರಲಿರುವ ‘ಲೈಗರ್’ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರಿಗೆ ಜತೆಯಾಗಿ ಅನನ್ಯಾ ಪಾಂಡೆ ನಟಿಸಿದ್ದಾರೆ. ಈ ಸಿನಿಮಾಗೆ ಪೂರಿ ಜಗನ್ನಾಥ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಪೂರಿ ಜಗನ್ನಾಥ್ ಬಂಡವಾಳ ಹೂಡಿದ್ದಾರೆ. ಈ ಸಿನಿಮಾ ನಿರ್ಮಾಣದಲ್ಲಿ ಕರಣ್ ಜೋಹರ್ ಮೊದಲಾದವರು ಸಾಥ್ ನೀಡಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಈ ಸಿನಿಮಾ ಮೂಲಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಸಿನಿಮಾ ರಿಲೀಸ್​ಗೂ ಮುನ್ನ ಕೆಲ ಚಿತ್ರತಂಡಗಳು ದೇವರ ಮೊರೆ ಹೋಗುತ್ತವೆ. ಈಗ ‘ಲೈಗರ್’ ತಂಡದವರು ಕೂಡ ದೇವರ ಮೊರೆ ಹೋಗಿದ್ದಾರೆ. ವಿಜಯ್ ದೇವರಕೊಂಡ ಅವರ ತಾಯಿ ‘ಲೈಗರ್’ ಚಿತ್ರ ಗೆಲ್ಲಲಿ ಎಂದು ಹೈದರಾಬಾದ್​​ ನಿವಾಸದಲ್ಲಿ ಪೂಜೆ ಮಾಡಿಸಿದ್ದಾರೆ. ವಿಜಯ್ ಹಾಗೂ ಅನನ್ಯಾ ಆಶೀರ್ವಾದ ಪಡೆದಿದ್ದಾರೆ. ಈ ಫೋಟೋಗಳನ್ನು ಅನನ್ಯಾ ಪಾಂಡೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘ಲೈಗರ್ ಚಿತ್ರದಲ್ಲಿ ವಿಜಯ್ ಬಾಕ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ವಿಜಯ್ ತಾಯಿ ಪಾತ್ರದಲ್ಲಿ ಹಿರಿಯ ನಟಿ ರಮ್ಯಾ ಕೃಷ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲೆಜೆಂಡರಿ ಬಾಕ್ಸರ್ ಮೈಕ್ ಟೈಸನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.

TV9 Kannada


Leave a Reply

Your email address will not be published.