ಸ್ನೇಹನ್ ಹಾಗೂ ಕನ್ನಿಕಾ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಲೈವ್ ಬರುತ್ತಾರೆ. ಇತ್ತೀಚೆಗೆ ಇಬ್ಬರೂ ಲೈವ್ ಬಂದಿದ್ದರು. ಈ ವೇಳೆ ಕನ್ನಿಕಾಗೆ ಕಿಸ್ ಮಾಡೋಕೆ ಹೋದರು ಸ್ನೇಹನ್.
ತಮಿಳು ಚಿತ್ರರಂಗದಲ್ಲಿ ಸ್ನೇಹನ್ ಅವರು ಹೆಸರು ಮಾಡಿದ್ದಾರೆ. ಅವರು ಗೀತ ಸಾಹಿತಿ ಕೂಡ ಹೌದು. ತಮಿಳು ಬಿಗ್ ಬಾಸ್ ಶೋಗೆ (Bigg Boss) ತೆರಳುವ ಮೂಲಕ ಖ್ಯಾತಿ ಹೆಚ್ಚಿಸಿಕೊಂಡರು. ಕನ್ನಿಕಾ ರವಿ ಅವರನ್ನು (Kannika Ravi) ಸ್ನೇಹನ್ 7 ವರ್ಷಗಳಿಂದ ಪ್ರೀತಿಸುತ್ತಿದ್ದರು. ಕಳೆದ ವರ್ಷ ಜೂನ್ 29ರಂದು ಇಬ್ಬರೂ ವಿವಾಹ ಆದರು. ಇಬ್ಬರೂ ಸುಖ ಸಂಸಾರ ನಡೆಸುತ್ತಿದ್ದಾರೆ. ಈಗ ಪತಿ ಮಾಡಿದ ಕೆಲಸಕ್ಕೆ ಕನ್ನಿಕಾ ಮುನಿಸಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಿಗ್ ಬಾಸ್ಗೆ ಕಾಲಿಟ್ಟ ನಂತರದಲ್ಲಿ ಜನಪ್ರಿಯತೆ ಹೆಚ್ಚುತ್ತದೆ. ಸ್ನೇಹನ್ ವಿಚಾರದಲ್ಲೂ ಹಾಗೆಯೇ ಆಗಿದೆ. ಅವರು ಬಿಗ್ ಬಾಸ್ ಫಿನಾಲೆವರೆಗೆ ತೆರಳಿದ್ದರು. ಅವರು ಗೆಲ್ಲಬೇಕು ಎಂದು ಅನೇಕರು ಅಂದುಕೊಂಡಿದ್ದರು. ಆದರೆ, ಅದು ಸಾಧ್ಯವಾಗಿಲ್ಲ. ಈ ರಿಯಾಲಿಟಿ ಶೋನಿಂದ ಅವರಿಗೆ ಸಿಕ್ಕಾಪಟ್ಟೆ ಜನಪ್ರಿಯತೆ ಸಿಕ್ಕಿತು. ಚಿತ್ರರಂಗದಲ್ಲಿ ಸಾಕಷ್ಟು ಮಂದಿ ಅವರನ್ನು ಗುರುತಿಸೋಕೆ ಆರಂಭಿಸಿದರು.
ಸ್ನೇಹನ್ ಹಾಗೂ ಕನ್ನಿಕಾ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಲೈವ್ ಬರುತ್ತಾರೆ. ಇತ್ತೀಚೆಗೆ ಇಬ್ಬರೂ ಲೈವ್ ಬಂದಿದ್ದರು. ಈ ವೇಳೆ ಕನ್ನಿಕಾ ಅವರು ತಾವು ಬಿಡಿಸಿದ ಹೊಸ ಪೇಂಟಿಂಗ್ ತೋರಿಸಿದ್ದಾರೆ. ಪೇಂಟಿಂಗ್ ಹೇಗಿದೆ ಎಂದು ಪತಿ ಬಳಿ ಕನ್ನಿಕಾ ಪ್ರಶ್ನೆ ಮಾಡಿದ್ದಾರೆ. ಸ್ನೇಹನ್ ಅವರು ಬಾಯ್ತುಂಬ ಈ ಪೇಂಟಿಂಗ್ ಹೊಗಳಿದ್ದಾರೆ.