ಲೈಸನ್ಸ್ ಪಡೆದಿಲ್ಲ ಅಂತ ರೋಗಿಗಳನ್ನು ಹೊರಕಳಿಸಿ ಆಸ್ಪತ್ರಗೆ ಬೀಗ; ರೋಗಿಗಳ ಪರದಾಟ | DHO closed Hospital in Hoskote


ಹೊಸಕೋಟೆ ನಗರದ ಜೆಎಂಎಸ್​ ಆಸ್ವತ್ರೆ ಲೈಸನ್ಸ್ ಪಡೆದಿಲ್ಲ ಅಂತ ಆಸ್ಪತ್ರೆಯಲ್ಲಿನ ರೋಗಿಗಳನ್ನು ಹೊರಕಳಿಸಿ ಜಿಲ್ಲಾ ವೈದ್ಯಾಧಿಕಾರಿ ಆಸ್ವತ್ರೆಗೆ ಬೀಗ ಹಾಕಿಸಿದ್ದಾರೆ.

ಲೈಸನ್ಸ್ ಪಡೆದಿಲ್ಲ ಅಂತ ರೋಗಿಗಳನ್ನು ಹೊರಕಳಿಸಿ ಆಸ್ಪತ್ರಗೆ ಬೀಗ; ರೋಗಿಗಳ ಪರದಾಟ

ಜೆಎಂಎಸ್ ಆಸ್ವತ್ರೆ

TV9kannada Web Team

| Edited By: Vivek Biradar

Aug 08, 2022 | 3:37 PM
ಬೆಂಗಳೂರು: ಹೊಸಕೋಟೆ (Hoskote) ನಗರದ ಜೆಎಂಎಸ್​ ಆಸ್ವತ್ರೆ ಲೈಸನ್ಸ್ ಪಡೆದಿಲ್ಲ ಅಂತ ಆಸ್ಪತ್ರೆಯಲ್ಲಿನ ರೋಗಿಗಳನ್ನು ಹೊರಕಳಿಸಿ ಜಿಲ್ಲಾ ವೈದ್ಯಾಧಿಕಾರಿ (DHO) ಆಸ್ವತ್ರೆಗೆ ಬೀಗ ಹಾಕಿಸಿದ್ದಾರೆ. ಆಸ್ಪತ್ರೆಗೆ ಬೀಗ ಹಾಕಿದ ಕಾರಣ ಚಿಕಿತ್ಸೆ ಕೋರ್ಸ್ ಆಗುತ್ತಿಲ್ಲ ಅಂತ ರೋಗಿಗಳು ಪರದಾಡುತ್ತಿದ್ದಾರೆ. ಹೀಗಾಗಿ ಜಿಲ್ಲಾ ಆರೋಗ್ಯಾಧಿಕಾರಿ ವಿರುದ್ದ ಜೆಎಮ್ಎಸ್ ಆಸ್ವತ್ರೆ ಮುಂದೆ ರೋಗಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. 40 ಕ್ಕೂ ಅಧಿಕ ಜನರು ಗ್ಯಾಂಗ್ರೀನ್ ನಿಂದಾಗಿ ಪರದಾಡುತ್ತಿದ್ದಾರೆ.

ಕೆಪಿಎಂಇ ಅನುಮತಿ ಪಡೆಯದೆ ನಡೆಸುತ್ತಿದ್ದಾರೆ ಅಂತ ಡಿಹೆಚ್ಒ ಬಂದ್ ಮಾಡಿಸಿದ್ದಾರೆ. ಆದರೆ ಆಸ್ವತ್ರೆ ಬಂದ್ ಮಾಡಿದ ನಂತರ ಕೆಲವರಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪ ಕೇಳಿಬರುತ್ತಿದೆ. 30 ಲಕ್ಷ ವರೆಗೂ ಹಣ ನೀಡಿದರೆ ಒಪನ್ ಮಾಡಿಸೂದಾಗಿ ಡಿಮ್ಯಾಂಡ್ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಅಧಿಕಾರಿಗಳ ವಿರುದ್ದ ರೋಗಿಗಳು  ರೊಚಿಗೆದ್ದಿದ್ದಾರೆ. ಸರ್ಕಾರಿ ಆಸ್ವತ್ರೆಯಲ್ಲು ಚಿಕಿತ್ಸೆ ಸಿಗುತ್ತಿಲ್ಲ ಇಲ್ಲು ಕೊಡಲು ಬಿಡುತ್ತಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *