ನಾವು ಹಸಿ ತರಕಾರಿಗಳನ್ನು ತಿನ್ನಬೇಕೆಂದು ಸರ್ಕಾರ ಬಯಸುತ್ತಿದೆಯೇ ಎಂದು ಕೇಳಿದ ಸಂಸದೆ ಹಸಿ ಬದನೆಕಾಯಿ ತಿನ್ನುವ ಮೂಲಕ ಅಡುಗೆ ಅನಿಲ ಬೆಲೆ ಏರಿಕೆಯನ್ನು ಖಂಡಿಸಿದ್ದಾರೆ.

ಬದನೆ ಕಾಯಿ ಕಚ್ಚಿ ತಿಂದ ಸಂಸದೆ
ದೆಹಲಿ: ಲೋಕಸಭೆಯಲ್ಲಿ (Lok sabha) ಬೆಲೆ ಏರಿಕೆ ಚರ್ಚೆ (Price Rise) ಸೋಮವಾರ ನಡೆದಿದ್ದು, ಚರ್ಚೆ ನಡುವೆ ಎದ್ದು ನಿಂತ ತೃಣಮೂಲ ಕಾಂಗ್ರೆಸ್ ಸಂಸದೆಯೊಬ್ಬರು ಎದ್ದು ನಿಂತು ಹಸಿ ಬದನೆಕಾಯಿಯನ್ನು ಕಚ್ಚಿ ತಿಂದಿದ್ದಾರೆ. ಬೆಲೆ ಏರಿಕೆ ಬಗ್ಗೆ ಚರ್ಚೆಗೆ ಅನುಮತಿ ನೀಡಿದ್ದಕ್ಕೆ ಸಭಾಪತಿ ಅವರಿಗೆ ಧನ್ಯವಾದಗಳು ಎಂದು ಕಕೋಲಿ ಘೋಷ್ ದಸ್ತಿದಾರ್ ಹೇಳಿದ್ದಾರೆ. ತುಂಬಾ ಕಾದು ಕಾದು ಕೊನೆಗೂ ಚರ್ಚೆಗೆ ಅವಕಾಶ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ . ಅಮಾನತು ಮಾಡಲಾಗಿದ್ದ ಕಾಂಗೆಸ್ ಸಂಸದರ ಅಮಾನತು ನಿರ್ಧಾರ ವಾಪಸ್ ತೆಗೆದುಕೊಂಡ ನಂತರ ಲೋಕಸಭೆಯಲ್ಲಿಂದು ಬೆಲೆ ಏರಿಕೆ ಚರ್ಚೆಗೆ ಬಂದಿದೆ. ನಾವು ಹಸಿ ತರಕಾರಿಗಳನ್ನು ತಿನ್ನಬೇಕೆಂದು ಸರ್ಕಾರ ಬಯಸುತ್ತಿದೆಯೇ ಎಂದು ಕೇಳಿದ ಸಂಸದೆ ಹಸಿ ಬದನೆಕಾಯಿ ಕಚ್ಚುವ ಮೂಲಕ ಅಡುಗೆ ಅನಿಲ ಬೆಲೆ ಏರಿಕೆಯನ್ನು ಖಂಡಿಸಿದ್ದಾರೆ.
ಕಳೆದ ಕೆಲವು ತಿಂಗಳಲ್ಲಿ ಎಲ್ ಪಿ ಜಿ ಸಿಲಿಂಡರ್ ಬೆಲೆ ನಾಲ್ಕು ಬಾರಿ ಏರಿಕೆ ಮಾಡಲಾಗಿದೆ. ಸಿಲಿಂಡರ್ ಬೆಲೆ 600ರಿಂದ 1,100ಕ್ಕೇರಿದೆ. ಸಿಲಿಂಡರ್ ದರವನ್ನು ಇಳಿಕೆ ಮಾಡಲೇ ಬೇಕು ಎಂದು ಸಂಸದೆ ಒತ್ತಾಯಿಸಿದ್ದಾರೆ.
ಜುಲೈ ತಿಂಗಳಲ್ಲಿ ಎಲ್ ಪಿಜಿ ಅಡುಗೆ ಅನಿಲ ಬೆಲೆ ಸಿಲಿಂಡರ್ ಗೆ 50 ಏರಿಕೆ ಮಾಡಲಾಗಿತ್ತು. ಕಳೆದ 1 ವರ್ಷದಲ್ಲಿ 8 ಬಾರಿ ಬೆಲೆ ಏರಿಕೆ ಮಾಡಲಾಗಿದೆ. 14.2 ಕೆಜಿ ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 1,053 ಆಗಿದೆ .