ಲೋಕಸಭೆಯಲ್ಲಿ ಸಂಸದರು ತಮಿಳಿನಲ್ಲಿ ಕೇಳಿದ ಪ್ರಶ್ನೆಗೆ ಸಚಿವರಿಂದ ಹಿಂದಿಯಲ್ಲಿ ಉತ್ತರ, ಇದು ಅವಮಾನ ಎಂದ ಶಶಿ ತರೂರ್ | Question asked in Tamil ministers giving replies in Hindi triggered heated exchanges In Lok Sabha


ಲೋಕಸಭೆಯಲ್ಲಿ ಸಂಸದರು ತಮಿಳಿನಲ್ಲಿ ಕೇಳಿದ ಪ್ರಶ್ನೆಗೆ ಸಚಿವರಿಂದ ಹಿಂದಿಯಲ್ಲಿ ಉತ್ತರ, ಇದು ಅವಮಾನ ಎಂದ ಶಶಿ ತರೂರ್

ಪೀಯೂಷ್ ಗೋಯಲ್

ದೆಹಲಿ: ತಮಿಳಿನಲ್ಲಿ ಕೇಳಿದ ಪ್ರಶ್ನೆಯು ಬುಧವಾರ ಲೋಕಸಭೆಯಲ್ಲಿ (Loksabha) ಪ್ರತಿಪಕ್ಷಗಳು ಮತ್ತು ಖಜಾನೆ ಪೀಠಗಳ ನಡುವೆ ವಾಕ್ಸಮರಕ್ಕೆ ಕಾರಣವಾಯಿತು. ಇದೆಲ್ಲ ಆರಂಭವಾಗಿದ್ದು ಪ್ರಶ್ನೋತ್ತರ ವೇಳೆಯಲ್ಲಿ. ಡಿಎಂಕೆ ಸದಸ್ಯ ಎ ಗಣೇಶಮೂರ್ತಿ (A Ganeshamurthi ) ಅವರು ತಮಿಳಿನಲ್ಲಿ ಎಫ್‌ಡಿಐ ಒಳಹರಿವಿನ ಕುರಿತು ಪೂರಕ ಪ್ರಶ್ನೆಯನ್ನು ಕೇಳಿದರು. ಇದಕ್ಕೆ ಪ್ರತಕ್ರಿಯಿಸಿದ ಕೇಂದ್ರ ಸಚಿವ ಪೀಯೂಷ್ ಗೋಯಲ್ (Piyush Goyal) ನನಗೆ ತಮಿಳಿನಲ್ಲಿ ಹೇಳಿದ ಮೊದಲ ಭಾಗ ಅರ್ಥವಾಗಿಲ್ಲ, ಅವರು ಯಾವ ಯೋಜನೆಯನ್ನು ಉಲ್ಲೇಖಿಸುತ್ತಿದ್ದಾರೆಂದು ತಿಳಿಯಲು ಬಯಸುತ್ತೇನೆ ಎಂದು ಹೇಳಿದರು.  “ನಾನು ಇಂಗ್ಲಿಷ್‌ನಲ್ಲಿ ಪ್ರಶ್ನೆ ಕೇಳಿದರೆ, ಸಚಿವರು ಇಂಗ್ಲಿಷ್‌ನಲ್ಲಿ ಮಾತ್ರ ಉತ್ತರಿಸಬೇಕು .ಸದಸ್ಯರೊಬ್ಬರು ತಮಿಳಿನಲ್ಲಿ ಪ್ರಶ್ನೆ ಕೇಳುತ್ತಾರೆ ಮತ್ತು ಸಚಿವರು ಹಿಂದಿಯಲ್ಲಿ ಉತ್ತರಿಸುತ್ತಾರೆ” ಎಂದು ಸದಸ್ಯರು ಟೀಕಿಸಿದರು. ನಾನು ಹಿಂದಿಯಲ್ಲಿ ಉತ್ತರಿಸಬಹುದು, ಸದಸ್ಯರಿಗೆ ಅನುವಾದ ಲಭ್ಯವಿರುತ್ತದೆ ಎಂದು ಗೋಯಲ್  ಹೇಳಿದ್ದಾರೆ.  ಇಂಗ್ಲಿಷ್‌ನಲ್ಲಿ ಕೇಳಿದ ಪ್ರಶ್ನೆಗಳಿಗೆ ಸಚಿವರು ಹಿಂದಿಯಲ್ಲಿ ಉತ್ತರಿಸಿದ ವಿಷಯವನ್ನು ಪ್ರಸ್ತಾಪಿಸಲು ಕೆಲವು ವಿರೋಧ ಪಕ್ಷದ ಸದಸ್ಯರು ಗದ್ದಲವೆಬ್ಬಿಸಿದರು. ಇತ್ತೀಚಿನ ದಿನಗಳಲ್ಲಿ ಸದನದಲ್ಲಿ ವಿರೋಧ ಪಕ್ಷದ ಸದಸ್ಯರು ಅದರಲ್ಲೂ ದಕ್ಷಿಣದ ರಾಜ್ಯಗಳ ಸದಸ್ಯರು ಇಂತಹ ಪ್ರವೃತ್ತಿಯ ವಿರುದ್ಧ ಪ್ರತಿಭಟಿಸಿದ ನಿದರ್ಶನಗಳಿವೆ. ಸ್ಪೀಕರ್ ಓಂ ಬಿರ್ಲಾ ಅವರು ಗಣೇಶಮೂರ್ತಿಯವರಿಗೆ ಪ್ರಶ್ನೆಯನ್ನು ಪುನರಾವರ್ತಿಸುವಂತೆ ಕೇಳಿದಾಗ ಅವರು ತಮಿಳಿನಲ್ಲಿ ಅದನ್ನೇ ಕೇಳಿದರು.

(ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ)

TV9 Kannada


Leave a Reply

Your email address will not be published.